ಅಪಘಾತದಲ್ಲಿ ಮೃತಪಟ್ಟವರ ವಸ್ತುಗಳ ಹಸ್ತಾಂತರ

ಅಪಘಾತದಲ್ಲಿ ಮೃತಪಟ್ಟವರ ವಸ್ತುಗಳ ಹಸ್ತಾಂತರ

ದಾವಣಗೆರೆ, ಜ. 20- ಧಾರವಾಡ ಬೈಪಾಸ್ ಬಳಿಯ ಇಟ್ಟಿಗಟ್ಟಿ ಗ್ರಾಮದ ಸಮೀಪ ಕಳೆದ ವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾವಣಗೆರೆ ಮಹಿಳೆಯರ ಆಭರಣಗಳು, ಲಗೇಜ್ ಬ್ಯಾಗುಗಳನ್ನು ಬುಧವಾರ ನಗರದ ದೊಡ್ಡಪೇಟೆ ಬಸವೇಶ್ವರ ಮತ್ತು ದಾನಮ್ಮ ದೇವಿ ದೇವಸ್ಥಾನದಲ್ಲಿ ಮೃತರ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.

ದಾವಣಗೆರೆಯಿಂದ ಗೋವಾಕ್ಕೆ ತೆರಳುತ್ತಿದ್ದ ಮಿನಿ ಬಸ್ ಹಾಗೂ ಟಿಪ್ಪರ್ ನಡುವೆ ಅಪಘಾತ ನಡೆದಿತ್ತು. ಈ ವೇಳೆ ದೇವರಮನೆ ವಿಜಯಕುಮಾರ್, ಶ್ರೀಮತಿ ದೇವರಮನೆ ರೇಖಾ, ಬಿಳಿಚೋಡು ಉಮೇಶ್ ಹಾಗೂ ಇತರರು ಮೃತರಿಗೆ ಸಂಬಂಧಿಸಿದ ವಸ್ತುಗಳನ್ನು ಒಂದಡೆ ಜೋಪಾನಮಾಡಿದ್ದರು. ವಾಚು, ತಾಳಿ, ಮೊಬೈಲ್, ಬಟ್ಟೆಯ ಬ್ಯಾಗ್‌ ಸೇರಿದಂತೆ ಅಪಘಾತ ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ಮೃತರ ಸಂಬಂಧಿಗಳು ಪತ್ತೆ ಹಚ್ಚೆ ಪಡೆದುಕೊಂಡರು. ಕೆಟಿಜೆ ನಗರ ಪೊಲೀಸ್ ಇನ್‌ಸ್ಪೆಕ್ಟರ್ ವೀರೇಶ್ ಸಮ್ಮುಖದಲ್ಲಿ ದೊಡ್ಡಪೇಟೆ ಬಸವೇಶ್ವರ ಸೇವಾ ಸಂಘ ಟ್ರಸ್ಟ್‌ನ ಸದಸ್ಯ ಬೇತೂರು ರಾಜೇಶ್, ಪಲ್ಲಾಗಟ್ಟೆ ರಾಜಣ್ಣ ಇತರರು ವಸ್ತುಗಳನ್ನು ಹಸ್ತಾಂತರಿಸುವಲ್ಲಿ ನೆರವಾದರು.

Leave a Reply

Your email address will not be published.