ಜಗಳೂರಿನಲ್ಲಿ ಶಾಸಕ ಎಸ್‌ವಿಆರ್ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಜಗಳೂರಿನಲ್ಲಿ ಶಾಸಕ ಎಸ್‌ವಿಆರ್ ಹುಟ್ಟುಹಬ್ಬದ ಅಂಗವಾಗಿ ರಕ್ತದಾನ ಶಿಬಿರ

ಜಗಳೂರು, ಜ.15- ಶಾಸಕ ಎಸ್.ವಿ. ರಾಮಚಂದ್ರ ಅವರ ಹುಟ್ಟು ಹಬ್ಬದ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ  ಸುಮಾರು 50 ಜನ ರಕ್ತದಾನ ಮಾಡಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ  ಆಯೋಜಕ ವಿಎಸ್‌ಎಸ್‌ಎನ್ ಅಧ್ಯಕ್ಷ ಬಿಸ್ತುವಳ್ಳಿ ಬಾಬು ಮಾತನಾಡಿ, ರಕ್ತದಾನ ಶ್ರೇಷ್ಠವಾಗಿದ್ದು ಯುವಕರು ರಕ್ತ ದಾನಕ್ಕೆ ಮುಂದಾಗಬೇಕು ಎಂದರು. 

ಸತತ ಮೂರನೇ ಬಾರಿ ಶಾಸಕ‌ ಎಸ್.ವಿ. ರಾಮಚಂದ್ರ ಅವರ ಅಭಿಮಾನಿ ಬಳಗದಿಂದ ಸ್ವಯಂ ಪ್ರೇರಿತವಾಗಿ 50ಕ್ಕೂ ಅಧಿಕ ಯುವಕರು  ರಕ್ತದಾನ ಮಾಡುತ್ತಿದ್ದು ತುರ್ತು ಸಂದರ್ಭದಲ್ಲಿ ರಕ್ತನಿಧಿ ಕೇಂದ್ರಗಳಿಂದ ರೋಗಿಗಳಿಗೆ ಸದುಪಯೋಗವಾಗುವ ಉದ್ದೇಶ ನಮ್ಮದಾಗಿದೆ. ಕೆಲ ಸಂದರ್ಭಗಳಲ್ಲಿ ರಕ್ತ ದೊರೆಯದೆ ಬಡರೋಗಿಗಳು ಪರದಾಡುವಂತಾಗುತ್ತದೆ. ವರ್ಷಕ್ಕೊಮ್ಮೆ ರಕ್ತದಾನ ಮಾಡಿದರೆ ವೈಯಕ್ತಿಕ ಆರೋಗ್ಯ ಸದೃಢವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ತಿಪ್ಪೇಸ್ವಾಮಿ ಸದಸ್ಯರಾದ ನವೀನ್ ಕುಮಾರ್, ಪಾಪಲಿಂಗಪ್ಪ, ಮುಖಂಡರಾದ ಸೂರ್ಯಕಿರಣ್, ಓಬಳೇಶ್, ಅಶೋಕ್, ನಾಗರಾಜ್ ಮರೇನಹಳ್ಳಿ, ಬಸವರಾಜ್, ಅಶೋಕ್ ಸೇರಿದಂತೆ ಇದ್ದರು.

Leave a Reply

Your email address will not be published.