ಅಕ್ರಮ ನೀರಾ ಸಂಗ್ರಹಣೆಯ ಆರೋಪಿಗೆ ಜೈಲು ಶಿಕ್ಷೆ

ದಾವಣಗೆರೆ, ಜ.15- ಅಕ್ರಮವಾಗಿ ಸಂಗ್ರಹಿಸಿಡ ಲಾದ ನೀರಾ ಪ್ರಕರಣದ ಆರೋಪಿಗೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ 2ನೇ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿ ಜ.5 ರಂದು ತೀರ್ಪು ನೀಡಿದೆ.

2015 ರ ಜುಲೈ ಮಾಹೆಯಲ್ಲಿ ದಾವಣಗೆರೆ ವಲಯ 2 ರ ಅಬಕಾರಿ ಉಪ ನಿರೀಕ್ಷಕ ಎಂ.ದೇವೇಂದ್ರನಾಯ್ಕ ಅವರು ದಾವಣಗೆರೆ ತಾಲ್ಲೂಕು ನೇರ್ಲಿಗೆ ಗ್ರಾಮದ ಪ್ರಕಾಶ್, 38 ವರ್ಷ ಅವರು ಮಾರಾಟದ ಉದ್ದೇಶಕ್ಕಾಗಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ 25 ಲೀಟರ್ ನೀರಾವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದರು. ಅಬಕಾರಿ ಉಪ ನಿರೀಕ್ಷಕ ಹೆಚ್.ಕೃಷ್ಣಮೂರ್ತಿ ಪ್ರಕರಣದ ಪೂರ್ಣ ತನಿಖೆ ನಡೆಸಿ, ಅಂತಿಮ ದೋಷಾರೋಪಣಾ ಪಟ್ಟಿಯನ್ನು 2ನೇ ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.

ಈ ಪ್ರಕರಣ ಕುರಿತು ಸುದೀರ್ಘ ವಿಚಾರಣೆ ನಡೆದು ಜ.5 ರಂದು 2ನೇ ಜೆಎಂಎಫ್‍ಸಿ ನ್ಯಾಯಾಧೀಶ ಕಿರಣ್.ಪಿ.ಎಂ.ಪಾಟೀಲ್ ಅವರು ಆರೋಪಿ ಪ್ರಕಾಶ್‍ಗೆ ಒಂದು ವರ್ಷ ಜೈಲು ಮತ್ತು ರೂ.10 ಸಾವಿರ ದಂಡ ವಿಧಿಸಿ ಅಂತಿಮ ತೀರ್ಪು ನೀಡಿ ಆದೇಶಿಸಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ವಸಂತ ಸರ್ಕಾರದ ಪರವಾಗಿ ವಾದ ಮಂಡಿಸಿರುತ್ತಾರೆ.

Leave a Reply

Your email address will not be published.