ವಾರದೊಳಗಾಗಿ ಶಾಲಾವಾರು ಇರುವ ಕೊರತೆಯ ಅಂಶಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ

ವಾರದೊಳಗಾಗಿ ಶಾಲಾವಾರು ಇರುವ ಕೊರತೆಯ ಅಂಶಗಳನ್ನು ಸರಿಪಡಿಸಿಕೊಳ್ಳದಿದ್ದರೆ ಸೂಕ್ತ ಕ್ರಮ

ಹರಪನಹಳ್ಳಿ ಬಿಇಒ ಎಸ್.ಎಂ.ವೀರಭದ್ರಯ್ಯ ಎಚ್ಚರಿಕೆ

ಹರಪನಹಳ್ಳಿ, ಜ.12- ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹರಪನಹಳ್ಳಿ ಉತ್ತರ ಮತ್ತು ದಕ್ಷಿಣ ಕ್ಲಸ್ಟರ್‌ಗಳ ವ್ಯಾಪ್ತಿಗೆ ಒಳಪಡುವ 54 ಶಾಲೆಗಳಿಗೆ ಮಿಂಚಿನ ಸಂಚಾರ ವಿದ್ಯಾಗಮ ಪ್ರಗತಿ ಅನಾವರಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಪಟ್ಟಣದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಪ್ರಾರಂ ಭವಾದ ಈ ಕಾರ್ಯಕ್ರಮ 17 ತಂಡಗ ಳನ್ನು ರಚಿಸಿಕೊಂಡು  ಶಾಲೆಗಳಿಗೆ ಸಂದ ರ್ಶನ ನೀಡಿ ಶಾಲೆಯಲ್ಲಿ ಕೋವಿಡ್-19  ಕ್ಕೆ ಸಂಬಂಧಿಸಿದಂತೆ ತೆಗೆದುಕೊಂಡಿರುವ ಕ್ರಮಗಳು, ವಿದ್ಯಾಗಮ ಕಾರ್ಯಕ್ರಮ ಪ್ರಾರಂಭವಾದಾಗಿ ನಿಂದ ಶಾಲೆಗೆ ಹಾಜರಾಗುತ್ತಿರುವ ಮಕ್ಕಳು, ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಶಾಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮಕ್ಕಳ ಕಲಿಕೆಗೆ ರೂಪಿಸಿದ ಯೋಜನೆಗಳಿಗೆ ಅನುಗುಣವಾಗಿ ಅನುಷ್ಠಾನದ ಬಗ್ಗೆ ದಾಖಲೆಗಳ ಸಮೇತ ಸಂದರ್ಶಕರು ಪರಿಶೀಲನೆ ಮಾಡಿದರು.

ಮಧ್ಯಾಹ್ನದ ಅವಧಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೇಗಳ ಪೇಟೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ರೊಂದಿಗೆ ಸಂದರ್ಶಕರು ಹಾಜರಾದರು. ತದನಂತರ ಸಂದರ್ಶನ ಅವಧಿಯಲ್ಲಿ ಕಂಡುಬಂದ ಲೋಪದೋಷಗಳನ್ನು ಮತ್ತು ಶಾಲೆಯಲ್ಲಿನ ವಿಷಯಗಳ ಬಗ್ಗೆ ಚರ್ಚೆಯನ್ನು ಮಾಡಲಾಯಿತು. ಶಾಲೆಯಲ್ಲಿ ಕಂಡುಬಂದ ಅಂಶಗಳನ್ನು ಮತ್ತು ಬೇಕಾದ ಅಂಶಗಳ ಬಗ್ಗೆ ಚರ್ಚಿಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ.ವೀರಭದ್ರಯ್ಯ ಅವರು ನಗರದ ಶಾಲೆಗಳ ಮುಖ್ಯ ಶಿಕ್ಷಕರುಗಳನ್ನು ಉದ್ದೇಶಿಸಿ ಇನ್ನೊಂದು ವಾರದೊಳಗಾಗಿ ಶಾಲಾ ವಾರು ತಮ್ಮ ಕೊರತೆಯ ಅಂಶಗಳನ್ನು ಸರಿಪಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಕ್ಷೇತ್ರ ಸಮನ್ವಯ ಅಧಿಕಾರಿ ಡಿ.ಮಲ್ಲಿಕಾರ್ಜುನ್, ಅಕ್ಷರ ದಾಸೋಹ ಕಾರ್ಯಕ್ರಮದ ಸಹಾಯಕ ನಿರ್ದೇಶಕ ಜಯರಾಜ್, ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಮುಸ್ತಫಾ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published.