ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ

ಯುವ ಜನರು ಜ್ಞಾನದ ಬೆನ್ನು ಹತ್ತಬೇಕು : ಡಿಸಿ ಮಹಾಂತೇಶ್ ಕರೆ

ದಾವಣಗೆರೆ, ಜ.12- ನಗರದ ವಿನ್ನರ್ಸ್ ಸಮೂಹ ಸಂಸ್ಥೆ ವತಿಯಿಂದ ನೂತನವಾಗಿ ಆರಂಭಿಸಿರುವ ವಿನ್ನರ್ಸ್ ಡಿಜಿ ಟಲ್ ಲೈಬ್ರರಿಯನ್ನು ಜಿಲ್ಲಾಧಿ ಕಾರಿ ಮಹಾಂತೇಶ್ ಬೀಳಗಿ ಉದ್ಘಾಟಿಸಿದರು. ಉನ್ನತ ಸಾಧ ನೆಗಳಿಗೆ ಯಾವುದೇ ಶಾರ್ಟ್‌ ಕಟ್ ದಾರಿಗಳು ಇರುವುದಿಲ್ಲ. ಜ್ಞಾನದಿಂದ ಆತ್ಮವಿಶ್ವಾಸ ವೃದ್ಧಿ ಸುತ್ತದೆ. ಯುವ ಜನರು ಜ್ಞಾನದ ಬೆನ್ನು ಹತ್ತಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ್, ಅಭಿಯಂತರ ಹೆಚ್.ವಿ. ಮಂಜುನಾಥ್, ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಮಾತನಾಡಿದರು. ಶಿಕ್ಷಣ ತಜ್ಞ ಡಾ. ಹೆಚ್.ವಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕೆಎಎಸ್ ಸಾಧಕರಿಗೆ ಸನ್ಮಾನಿಸಲಾಯಿತು.  ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಕೆ.ಆರ್. ಚಂದ್ರಶೇಖರಪ್ಪ ಉಪಸ್ಥಿತರಿದ್ದರು. 

ಸಂಸ್ಥೆಯ ಸಂಸ್ಥಾಪಕ ಡಾ. ಶಿವರಾಜ್ ಕಬ್ಬೂರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಸ್ವಾಗತಿಸಿದರು. ಉಪನ್ಯಾಸಕರಾದ ಜೆ.ಪಿ. ಪ್ರದೀಪ್ ಕುಮಾರ್ ವಂದಿಸಿದರು. ಎನ್.ಟಿ. ಮರುಳಸಿದ್ದಪ್ಪ ನಿರೂಪಿಸಿದರು.

Leave a Reply

Your email address will not be published.