ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ

ಪಂಚಮಸಾಲಿ ಪೀಠದಲ್ಲಿ ನಾಳೆ ಹರ ಜಾತ್ರೆ : ಬಂದೋಬಸ್ತ್ ಪರಿಶೀಲನೆ

ಹರಿಹರ, ಜ.12- ಹರಿಹರದ ಪಂಚಮಸಾಲಿ ಪೀಠದಿಂದ ನಾಡಿದ್ದು ನಾಡಿದ್ದು ದಿನಾಂಕ 14 ಮತ್ತು 15ರಂದು ಹರ ಜಾತ್ರಾ ಮಹೋತ್ಸವ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯವರು ಸೂಕ್ತ ಬಂದೋಬಸ್ತ್ ಮಾಡುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರೊಂದಿಗೆ ಇಂದು ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ರಾಜೀವ್, ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ, ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು, ಪಿಎಸ್‌ಐಗಳಾದ ವೀರಬಸಪ್ಪ ಕುಸಲಾಪುರ, ಡಿ ರವಿಕುಮಾರ್, ಚಂದ್ರಶೇಖರ್, ಕರಿಬಸಪ್ಪ, ಬಿ. ಲೋಕೇಶ್ ಹಾಗೂ ಇತರರು ಇದ್ದರು. 

Leave a Reply

Your email address will not be published.