ದಾವಣಗೆರೆ, ಜ.12- ಸ್ಥಳೀಯ ವಿದ್ಯಾನಗರ ಇನ್ನರ್ವ್ಹೀಲ್ ಸಂಸ್ಥೆಯ ಸಂಸ್ಥಾಪಕ ದಿನವನ್ನು ಶ್ರೀಮತಿ ಸಾವಿತ್ರಿ ನೆಸ್ವಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಚಿತ್ರದುರ್ಗದ ಶ್ರೀಮತಿ ಜ್ಯೋತಿ ಲಕ್ಷ್ಮಣ್ (ವಿಡಿಸಿ) ಆಗಮಿಸಿದ್ದರು. ಅಂದು ಕೊರೊನಾ ವಾರಿಯರ್ ಆಗಿದ್ದ ಅರಿವಳಿಕೆ ತಜ್ಞರಾದ ಡಾ|| ಎ.ಎಂ. ಶಿಲ್ಪಾಶ್ರೀ, ವೈದ್ಯಕೀಯ ಶುಶ್ರೂಷಕಿಯರಾದ ಶ್ರೀಮತಿ ಮೀನಾಕ್ಷಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅವರು ಕೊರೊನಾ ಸೋಂಕಿತರಿಗೆ ತಾವು ಸಲ್ಲಿಸಿದ ಸೇವೆಯ ಅನುಭವವನ್ನು ಹಂಚಿಕೊಂಡರು. ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಸುಜಾತ ಚಂದ್ರಾಚಾರ್ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ಪರಿಚಯ ಮಾಡಿಕೊಟ್ಟರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಎನ್.ಬಿ. ಮೃತ್ಯುಂಜಯಪ್ಪ ಮತ್ತು ರೋಟರಿಯ ಉಪ ರಾಜ್ಯಪಾಲರಾದ ಹೆಚ್.ಎಂ. ಚಂದ್ರಾಚಾರ್ ಉಪಸ್ಥಿತರಿದ್ದರು
Leave a Reply