3 ಮಣ್ಣು ಮುಕ್ಕ ಹಾವುಗಳ ವಶ

3 ಮಣ್ಣು ಮುಕ್ಕ ಹಾವುಗಳ ವಶ

ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ

ದಾವಣಗೆರೆ, ಜ.10- ಅಳಿವಿನಂಚಿನಲ್ಲಿರುವ ಎರಡು ತಲೆಯ ಮಣ್ಣು ಮುಕ್ಕ ಹಾವು ಗಳ ಮಾರಾಟ ತಂಡದ ಮೇಲೆ ದಾಳಿ ನಡೆಸಿರುವ ಪೊಲೀಸರು ಐವರನ್ನು ಬಂಧಿಸಿ 3 ಹಾವುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಳ್ಳಕೆರೆ ತಾಲ್ಲೂಕು ಓಬೇನಹಳ್ಳಿ ಗ್ರಾಮದ ಗಣೇಶ್, ಐಟಿಐ ವಿದ್ಯಾರ್ಥಿ, ಚನ್ನಗಿರಿ ತಾಲ್ಲೂಕು ನಲ್ಲೂರು ಗ್ರಾಮದ ಅಭಿಲಾಷ್, ಹೂವಿನಹಡಗಲಿ ತಾಲ್ಲೂಕಿನ ಅಂಗುರು ಗ್ರಾಮದ ನಾಗರಾಜ ಮತ್ತು ಮುತ್ತಪ್ಪ ಹಾಗೂ ಚನ್ನಗಿರಿ ತಾಲ್ಲೂಕು ಗಾಣದಕಟ್ಟೆ ಗ್ರಾಮದ ಪ್ರಜ್ವಲ್ ಬಂಧಿತರು. 

ಎಸ್ಪಿ ಹನುಮಂತರಾಯ, ಎಎಸ್ಪಿ ಎಂ. ರಾಜೀವ್, ಡಿಸಿಆರ್‍ಬಿ ವಿಭಾಗದ ಪೊಲೀಸ್ ಉಪಾಧಿಕ್ಷಕ ಬಿ.ಎಸ್. ಬಸವರಾಜ್ ಮಾರ್ಗದರ್ಶನದಲ್ಲಿ ದಾವಣಗೆರೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಬಿ.ವಿ. ಗಿರೀಶ್, ಸಿಬ್ಬಂದಿಗಳಾದ ಪಿ. ನಾಗರಾಜ, ವೈ.ಬಿ. ರವಿ, ಎಸ್. ಲೋಹಿತ್, ಬಿ. ನಾಗರಾಜ, ಎಸ್. ಗೋವಿಂದರಾಜ, ಮಲ್ಲಿಕಾರ್ಜುನ ಹಾದಿಮನಿ, ದ್ಯಾಮೇಶ್ ಒಳಗೊಂಡ ತಂಡವು ಉಪವಲಯ ಅರಣ್ಯಧಿಕಾರಿ ಹೆಚ್.ಎಸ್. ಚಂದ್ರಶೇಖರ್, ಅರಣ್ಯ ರಕ್ಷಕ ಬರ್ಕತ್ ಅಲಿ ಸಹಕಾರದಲ್ಲಿ ದಾಳಿ ಮಾಡಿದೆ.

ಹಾವುಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಅರಣ್ಯ ಅಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ.

Leave a Reply

Your email address will not be published.