ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಾಗಿರಬೇಕು

ಗ್ರಾಮಗಳ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಾಗಿರಬೇಕು

ಭಾನುವಳ್ಳಿಯಲ್ಲಿ ದೊಡ್ಡ ಎಡೆಪೂಜೆ ಕಾರ್ಯಕ್ರಮದಲ್ಲಿ ನೂತನ ಗ್ರಾ.ಪಂ. ಸದಸ್ಯರಿಗೆ ಶಾಸಕ ರಾಮಪ್ಪ ಕಿವಿಮಾತು

ಮಲೇಬೆನ್ನೂರು, ಜ.10- ನೂತನವಾಗಿ ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುವವರು ಗ್ರಾಮದ ಅಭಿವೃದ್ಧಿಗಾಗಿ ಪಕ್ಷಾತೀತವಾಗಿ ಒಗ್ಗಟ್ಟಾ ಗಿರಿ ಎಂದು ಶಾಸಕ ಎಸ್‌. ರಾಮಪ್ಪ ಹೇಳಿದರು.

ಭಾನುವಳ್ಳಿ ಗ್ರಾಮದಲ್ಲಿ ಶ್ರೀ ಬೀರಲಿಂಗೇಶ್ವರ ದೇವರುಗಳ, ಹಾಲುಮತ ಮಹಾಮಹಿಮರ ಕಾರ್ತಿಕೋತ್ಸವ ಹಾಗೂ ದೊಡ್ಡ ಎಡೆಪೂಜೆ ಅಂಗವಾಗಿ ನಿನ್ನೆ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನೂತನ ಗ್ರಾ.ಪಂ. ಸದಸ್ಯರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಸದಸ್ಯರು ಒಗ್ಗಟ್ಟಾಗಿದ್ದರೆ ನಾವೂ ಕೂಡಾ ನಿಮ್ಮ ಜೊತೆ ಕೈ ಜೋಡಿಸುತ್ತೇವೆ. ಚುನಾವಣೆ ಬಂದಾಗ ಮಾತ್ರ ಪಕ್ಷ ಮಾಡಿ, ನಂತರ ಎಲ್ಲರೂ ಸಾಮರಸ್ಯದಿಂದ ಜೀವನ ನಡೆಸಬೇಕೆಂದು ರಾಮಪ್ಪ ಕಿವಿಮಾತು ಹೇಳಿದರು.

ಭಾನುವಳ್ಳಿ ಗ್ರಾಮದಲ್ಲಿ ಕಳೆದ 30-40 ವರ್ಷಗಳಿಂದ ಬೀರಲಿಂಗೇಶ್ವರ ಸ್ವಾಮಿಯ ದೊಡ್ಡ ಎಡೆ ಜಾತ್ರೆಯ ಅಂಗವಾಗಿ ಸಾಮೂಹಿಕ ವಿವಾಹ ಏರ್ಪಡಿಸುತ್ತಾ ಬಂದಿರುವುದು ಮಾದರಿ ಕೆಲಸವಾಗಿದೆ. ಜೊತೆಗೆ ಜನರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿರುವುದು ಶ್ಲಾಘನೀಯ ಎಂದು ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು. 

ಗ್ರಾಮದ ವೇ. ನಾಗಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಜಿ. ದ್ಯಾಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಡಾ. ರಶ್ಮಿ ವೈ. ನಾಗಪ್ಪ, ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ಗ್ರಾಮದ ನಿವೃತ್ತ ಅಧಿಕಾರಿಗಳಾದ ಕೆ. ಸಿದ್ದಪ್ಪ, ಜಿ. ಚಂದ್ರಪ್ಪ, ಹೆಚ್‌. ಪದ್ದಪ್ಪ, ನಿವೃತ್ತ ಪೊಲೀಸ್‌ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್‌, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ತಾ. ಕುರುಬ ಸಮಾಜದ ಕಾರ್ಯದರ್ಶಿ ಕೆ.ಪಿ. ಗಂಗಾಧರ್‌, ಗ್ರಾಮದ ಕೆ. ಬೀರಪ್ಪ, ಪೂಜಾರ್ ಹಾಲಪ್ಪ, ಹೆಚ್‌.ಕೆ. ಕನ್ನಪ್ಪ, ಪಿಡಿಒ ನಾಗರಾಜ್‌ ಸಾರಥಿ ಪಿಎಸಿಎಸ್‌ ಅಥಣಿ ಸದಾನಂದಪ್ಪ, ಬೀರೇಶ್ವರ ಶಾಲೆ ಅಧ್ಯಕ್ಷ ಹೆಚ್‌.ಸಿ. ಬಸವನಗೌಡ ಮತ್ತಿತರರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ 13 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಗ್ರಾ.ಪಂ. ನೂತನ ಸದಸ್ಯರಾದ ಕೆ. ಚಂದ್ರಪ್ಪ, ಬಿ.ಎನ್‌. ಚಂದ್ರಪ್ಪ, ಪವಾಟಿ ಮಂಜಪ್ಪ, ಡಿ. ಮುಸ್ತಾಫ್‌, ಗಿರಿಜಮ್ಮ, ರೇಣುಕಮ್ಮ ಅವರನ್ನು ಸನ್ಮಾನಿಸಲಾಯಿತು.

ಹೆಚ್‌.ಎಸ್‌. ಕರಿಯಪ್ಪ ಸ್ವಾಗತಿಸಿದರು. ಯು.ಕೆ. ಅಣ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಸವರಾಜ್ ನಿರೂಪಿಸಿದರೆ, ಮಹೇಂದ್ರ ವಂದಿಸಿದರು.

ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜ ನಾನಂದಪುರಿ ಸ್ವಾಮೀಜಿ, ರಟ್ಟಿಹಳ್ಳಿ ಸ್ವಾಮೀಜಿ ದೊಡ್ಡ ಎಡೆ ಪೂಜೆಯಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published.