ಐದು ಮನೆಗಳ್ಳತನ ಪ್ರಕರಣಗಳನ್ನು ಬೇಧಿಸಿರುವ ಪೊಲೀಸರು, ನಾಲ್ವರನ್ನು ಬಂಧಿಸಿ, ಒಟ್ಟು 9 ಲಕ್ಷದ 30 ಸಾವಿರ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸಾಪುರದಲ್ಲಿ ಮಹೇಶ್ವರ ಸ್ವಾಮಿ ಜಾತ್ರೆ
ನಗರ ಪಾಲಿಕೆ ವ್ಯಾಪ್ತಿಯ 21 ನೇ ವಾರ್ಡ್ ಬಸಾಪುರದಲ್ಲಿ ಮಂಗಳವಾರ ನಡೆದ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆಗೆ ಕೈಗಾರಿಕೋದ್ಯಮಿ ಎಸ್.ಎಸ್. ಗಣೇಶ್ ಅವರು ಆಗಮಿಸಿ, ಸ್ವಾಮಿಯ ಆಶೀರ್ವಾದ ಪಡೆದರು.
ಕೊರೊನಾದಿಂದ ವೈಭವ ಕಳೆದುಕೊಂಡ ಬಸಾಪುರ ಮಹೇಶ್ವರ ಜಾತ್ರೆ
ಮಹೇಶ್ವರ ಜಾತ್ರೆಗೆ ಪ್ರಸಿದ್ಧವಾದ ಸ್ಥಳ ಬಸಾಪುರ, ಹತ್ತಾರು ವರ್ಷಗಳಿಂದ ತನ್ನದೇ ಆದ ವೈಭವವನ್ನು ಹೊಂದಿದ್ದ ಬಸಾಪುರದ ಮಹೇಶ್ವರ ಜಾತ್ರೆ ಈ ವರ್ಷ ಕೊರೊನಾ ಕಾರಣದಿಂದ ಕೇವಲ ಮೊದಲ ದಿನದ ಮಹಾಪಂಕ್ತಿಗೆ ಮಾತ್ರ ಸೀಮಿತವಾಗಿ ಜಾತ್ರೆಯ ಕಳೆ ಕಳೆದುಕೊಂಡಿದೆ.
ಹರಿಹರ: ಅಪರಿಚಿತನಿಗೆ ಹಣ ನಗದೀಕರಿಸಿದ ಎಸ್.ಬಿ.ಐ. ವಿರುದ್ಧ ಪ್ರತಿಭಟನೆ
ಹರಿಹರ ನಗರದ ಎಸ್ಬಿಐ ಬ್ಯಾಂಕ್ನವರು, ಎಸ್.ಎಂ. ರಾಜು ಅವರ ಉಳಿತಾಯ ಖಾತೆಯಿಂದ ಒಂದೂ ವರೆ ಲಕ್ಷ ರೂ.ಗಳನ್ನು ಅಪರಿಚಿತ ವ್ಯಕ್ತಿಗೆ ಹಣ ನಗದಿಕರಿಸಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಆರೋಪ ಮಾಡಿದ್ದಾರೆ.
ಹರಿಹರ : ತುಂಗಭದ್ರಾ ನದಿಯ ತೀರದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರೆ
ತುಂಗಭದ್ರಾ ನದಿಯ ದಂಡೆಯ ಲ್ಲಿರುವ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನಿಮಿತ್ತವಾಗಿ ಬೆಳಿಗ್ಗೆ ಮಹೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿ ನಂತರದಲ್ಲಿ ಪ್ರಸಾದ ವಿನಿಯೋಗ ನಡೆಯಿತು.
ಮಠ-ಮಾನ್ಯಗಳು ಶಾಂತಿ ಕೇಂದ್ರಗಳು
ಹೊನ್ನಾಳಿ : ಮಠ-ಮಾನ್ಯ ಗಳು ಶಾಂತಿ-ನೆಮ್ಮದಿಯ ಕೇಂದ್ರಗಳು ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
ಜೋಯಿಸರಹರಳಹಳ್ಳಿಯಲ್ಲಿ ದೇವಸ್ಥಾನಕ್ಕೆ ಕಳಸಾರೋಹಣ
ರಾಣೇಬೆನ್ನೂರು ತಾಲ್ಲೂಕಿನ ಜೋಯಿಸರ ಹರಳಹಳ್ಳಿ ಗ್ರಾಮದ ಶ್ರೀ ಗುರುಶಾಂತೇಶ್ವರ ಹಾಗೂ ಶ್ರೀ ಮಳಿಶಾಂತೇಶ್ವರ ಸ್ವಾಮಿಗಳ ದೇವಸ್ಥಾನದ ಕಳಸಾರೋಹಣ ಸಮಾರಂಭ ನಿನ್ನೆ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜರುಗಿತು.
ಸಾವಿತ್ರಿಬಾಯಿ ಫುಲೆ ಅನುಪಮ ಸಮಾಜ ಸುಧಾರಕಿ, ಅನನ್ಯ ಶಿಕ್ಷಕಿ
ಹೊನ್ನಾಳಿ : ದೇಶದ ಪ್ರಥಮ ಶಿಕ್ಷಕಿ ಎಂಬ ಹಿರಿಮೆಯ ಸಾವಿತ್ರಿಬಾಯಿ ಫುಲೆ ಅನುಪಮ ಸಮಾಜ ಸುಧಾರಕಿ, ಅನನ್ಯ ಶಿಕ್ಷಕಿ ಎಂದು ಸಿ.ಎಂ. ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಬಣ್ಣಿಸಿದರು.
ಅಸಮಾನತೆ ನಿಂತ ನೀರು, ಸಮಾನತೆ ಹರಿಯುವ ನೀರು
ಅಸಮಾನತೆ ನಿಂತ ನೀರು. ಆದರೆ, ಸಮಾನತೆ ಹರಿಯುವ ನೀರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಶ್ಲೇಷಿಸಿದರು.
ಅಂಗವಿಕಲರ ಗುರುತಿನ ಚೀಟಿ ನೋಂದಣಿ ಅಭಿಯಾನ
ಪರಿಷ್ಕೃತ ಅಂಗವಿಕಲರ ಕಾಯ್ದೆ 2016 ಅಡಿಯಲ್ಲಿ ಹಿಮೋಫಿಲಿಯಾ ರಕ್ತಸ್ರಾವ ರೋಗವು ಸೇರಿಸಿದ ನಂತರ ವಿಶಿಷ್ಟ ಅಂಗವಿಕಲರ ಗುರುತಿನ ಚೀಟಿ ನೋಂದಣಿ ಅಭಿಯಾನವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.