ಸೇವೆ ಗುರುತಿಸಿ ಬೆಂಬಲಿಸಿದ್ದಾರೆ : ಸಂತೋಷ ಭಟ್

ಸೇವೆ ಗುರುತಿಸಿ ಬೆಂಬಲಿಸಿದ್ದಾರೆ : ಸಂತೋಷ ಭಟ್

ರಾಣೇಬೆನ್ನೂರು, ಜ.1- ನನ್ನ ಸೇವೆಗೆ ಜನ ಬೆಂಬಲ ನೀಡಿದ್ದಾರೆ ಎಂದು ದೇವರಗುಡ್ಡದ ಪ್ರಧಾನ ಅರ್ಚಕ ಸಂತೋಷ ಭಟ್ ಹೇಳಿದರು. ಅವರು ತಮ್ಮ ಸಂಘಟನೆಯಿಂದ ಜಯ ಗಳಿಸಿದ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದರು.

ಕಳೆದ ನಲವತ್ತು ವರ್ಷಗಳಿಂದ ರಾಷ್ಟ್ರೀಯ ಪಕ್ಷಗಳ ಆಡಳಿತಕ್ಕೆ ಬೇಸತ್ತ ಇಲ್ಲಿನ ಜನರು, ಕಳೆದ ನಾಲ್ಕಾರು ತಿಂಗಳ ನನ್ನ ಸೇವೆ ಗುರುತಿಸಿ ನಮ್ಮ ಊರು, ನಮ್ಮ ಗುರಿ ಸಂಘಟನೆಯ ಜೊತೆ ನಿಂತಿದ್ದಾರೆ ಎಂದರು. ಮುನಿರತ್ನ ಅವರು ನನಗೆ ಗಾಡ್ ಫಾದರ್. ಆದರೆ, ರಾಣೇಬೆನ್ನೂರು ಶಾಸಕ ನನ್ನ ಬೆನ್ನೆಲುಬು. ರಾಜಕೀಯದ ಯಾವ ಅಧಿಕಾರದ ಆಕಾಂಕ್ಷೆ ನನಗಿಲ್ಲ. ಕೇವಲ ಈ ಗ್ರಾಮದ, ಈ ಕ್ಷೇತ್ರದ ಅಭಿವೃದ್ದಿ ನನ್ನ ಗುರಿ. ಅದಕ್ಕಾಗಿ ಬ್ಯಾಡಗಿ ಶಾಸಕರ ಸಹಕಾರ ಕೋರುತ್ತೇನೆ ಎಂದು ಸಂತೋಷ ಭಟ್ ಹೇಳಿದರು.

Leave a Reply

Your email address will not be published.