ಶಾಸಕ ಪರಮೇಶ್ವರ ನಾಯ್ಕ್‌ ಪುತ್ರ ಟಿ. ಭರತ್‌ಗೆ ಎರಡನೇ ಬಾರಿ ಗೆಲುವು

ಶಾಸಕ ಪರಮೇಶ್ವರ ನಾಯ್ಕ್‌ ಪುತ್ರ ಟಿ. ಭರತ್‌ಗೆ ಎರಡನೇ ಬಾರಿ ಗೆಲುವು

ಹರಪನಹಳ್ಳಿ, ಜ. 1-  ಮಾಜಿ ಸಚಿವರೂ ಆದ ಹೂವಿನಹಡಗಲಿ  ಶಾಸಕ ಪಿ.ಟಿ. ಪರಮೇಶ್ವರನಾಯ್ಕ್ ಪುತ್ರ ಪಿ.ಟಿ. ಭರತ್ ತಾಲ್ಲೂಕಿನ ಲಕ್ಷ್ಮೀ ಪುರ ಗ್ರಾಮ ಪಂಚಾಯ್ತಿಗೆ ಸ್ಪರ್ಧಿಸಿ, ಸತತ ಎರಡನೇ  ಬಾರಿ ಆಯ್ಕೆ ಯಾಗಿ  ಸಾಮಾನ್ಯ ಕ್ಷೇತ್ರದಿಂದ ಅತೀ ಹೆಚ್ಚು ಮತಗಳನ್ನು ಪಡೆದು ಗೆದ್ದು ಬೀಗಿದರು. 

ಕಳೆದ ಅವಧಿಯಲ್ಲಿ ಲಕ್ಷ್ಮೀಪುರ ಪಂಚಾಯ್ತಿಗೆ  ಆಯ್ಕೆಯಾಗಿ ಅಧ್ಯಕ್ಷರೂ ಆಗಿದ್ದ ಪಿ.ಟಿ. ಭರತ್ ಈ ಬಾರಿ 729 ಮತಗಳನ್ನು  ಪಡೆದು ಜಯಶಾಲಿಯಾಗಿದ್ದಾರೆ. 

ಪಿ.ಟಿ. ಪರಮೇಶ್ವರನಾಯ್ಕ್‍ ಗ್ರಾಮ ಪಂಚಾಯ್ತಿಯಿಂದಲೇ ತಮ್ಮ ರಾಜಕೀಯ ಜೀವನ  ಆರಂಭಿಸಿದ್ದರು. ಇದೀಗ ಪುತ್ರ ಅದೇ ಹಾದಿಯಲ್ಲಿ ಸಾಗಿದ್ದಾರೆ. ಈ ಸಂದರ್ಭದಲ್ಲಿ ಪಿ.ಎಲ್.ಡಿ. ಬ್ಯಾಂಕ್ ನಿರ್ದೆಶಕ ಪಿ.ಎಲ್. ಪೋಮ್ಯನಾಯ್ಕ ಹಾಗೂ ಇನ್ನಿತರರಿದ್ದರು.

Leave a Reply

Your email address will not be published.