ರಾಜನಹಳ್ಳಿ ಜಾಕ್‌ವೆಲ್ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ದಂಪತಿ ಸಾವು

ರಾಜನಹಳ್ಳಿ ಜಾಕ್‌ವೆಲ್ ಸೇತುವೆ ಬಳಿ ರಸ್ತೆ ಅಪಘಾತದಲ್ಲಿ ದಂಪತಿ ಸಾವು

ಹರಿಹರ, ಜ.1- ನಗರದ ಹೊರವಲಯದ ರಾಜನಹಳ್ಳಿ ಜಾಕ್‌ವೆಲ್ ಹತ್ತಿರದ ಸೇತುವೆಯ ಬಳಿ ಲಾರಿ ಮತ್ತು ಬೈಕ್‌ಗೆ ಡಿಕ್ಕಿ ಸಂಭವಿಸಿದ ಪರಿಣಾಮವಾಗಿ ರಾಣೇಬೆನ್ನೂರು ತಾಲ್ಲೂಕಿನ ಒಡೆಯರಾಯನಹಳ್ಳಿ ಗ್ರಾಮದ ಹಾಲಪ್ಪ ಉಜ್ಜನಗೌಡ್ರು ಮತ್ತು ಅವರ ಪತ್ನಿ ಸಿದ್ದಮ್ಮ  ಮೃತಪಟ್ಟಿದ್ದಾರೆ.

ಸೇತುವೆಯ ಮೇಲೆ ಒಡೆಯರಾಯನಹಳ್ಳಿ ಗ್ರಾಮದ ಹಾಲಪ್ಪ ತಮ್ಮ ಪತ್ನಿ ಜೊತೆಯಲ್ಲಿ ಆನಗೋಡು ಗ್ರಾಮದ ಅಂಗಡಿಗೆ ಎಳನೀರು ಹಾಕಿ ವಾಪಸ್ ತಮ್ಮ ಹಳ್ಳಿಗೆ ತೆರಳುವಾಗ ರಾಜನಹಳ್ಳಿ ಹತ್ತಿರದ ಜಾಕ್‌ವೆಲ್ ಬಳಿ ಇರುವ ಸೇತುವೆಯ ಮೇಲೆ ತಮಿಳುನಾಡಿನ ಟಿಎನ್ 88-ಬಿ4645 ಸಂಖ್ಯೆಯ ಲಾರಿ ಹಿಂದಿನಿಂದ ಬಂದ ಕೆಎ17 ಎಎಫ್ 2640 ಸಂಖ್ಯೆಯ ಬೈಕ್‌ಗೆ ಡಿಕ್ಕಿ ಹೊಡೆದಾಗ, ಹಿಂದೆ ಇದ್ದ ಪತ್ನಿ ಸಿದ್ದಮ್ಮ ಸೇತು ವೆಯ ಮೇಲಿನಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಪತಿ ಹಾಲಪ್ಪ ಹರಿ ಹರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಡಿ. ರವಿಕುಮಾರ್ ಭೇಟಿ ನೀಡಿ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ಗುತ್ತೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Leave a Reply

Your email address will not be published.