ಮಲೇಬೆನ್ನೂರಿನಲ್ಲಿ ತಂಬಾಕು ಮಾರಾಟ ಮಳಿಗೆ ಮೇಲೆ ದಾಳಿ

ಮಲೇಬೆನ್ನೂರು, ನ.21- ಪಟ್ಟಣದಲ್ಲಿ ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಿಢೀರ್ ದಾಳಿ ಮಾಡಿದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ನೇತೃತ್ವದ ತಂಡ ಪ್ರಕರಣ ದಾಖಲು ಮಾಡಿ ದಂಡ ವಿಧಿಸಿದರು.

ಪುನಃ ಅಂಗಡಿಗಳಲ್ಲಿ ತಂಬಾಕು ವಸ್ತುಗಳನ್ನು ಮಾರಾಟ ಮಾಡಿದರೆ ಅಂಗಡಿ ಬಂದ್ ಮಾಡಿಸುವ ಎಚ್ಚರಿಕೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಹೆಚ್. ಪಾಟೀಲ್, ಹಿರಿಯ ಆರೋಗ್ಯ ಸಹಾಯಕ ಉಮ್ಮಣ್ಣ, ಜಿಲ್ಲಾ ಸಲಹೆಗಾರ ಸತೀಶ್, ಸಮಾಜ ಕಾರ್ಯಕರ್ತ ದೇವರಾಜ್, ಪುರಸಭೆ ಅಧಿಕಾರಿಗಳಾದ ಉಮೇಶ್, ಗುರುಪ್ರಸಾದ್, ನವೀನ್, ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾಧಿಕಾರಿ ಕೊಟ್ರೇಶ್, ಎಎಸ್‌ಐ ಬಸವರಾಜಪ್ಪ ತಂಡದಲ್ಲಿದ್ದರು.

Leave a Reply

Your email address will not be published.