ಬಿಎಸ್‌ಸಿ ಯಿಂದ ಸಾಧಕರಿಗೆ ಸನ್ಮಾನ

ಬಿಎಸ್‌ಸಿ ಯಿಂದ ಸಾಧಕರಿಗೆ ಸನ್ಮಾನ

ದಾವಣಗೆರೆ, ನ.21- ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕನ್ನಡ ಸಾಧಕರಾದ ಹಿರಿಯ ವ್ಯಂಗ್ಯ ಚಿತ್ರಕಾರ ಹೆಚ್.ಬಿ. ಮಂಜುನಾಥ್, ತಾಲ್ಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ, ಕನ್ನಡಪರ ಹೋರಾಟಗಾರ ಬಸವರಾಜ ಐರಣಿ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಬಿಎಸ್‌ಸಿ ಎಕ್ಸ್‌ಕ್ಲೂಸಿವ್ ಷೋರೂಂ ಮಳಿಗೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗಡಿ ಮಾಲೀಕರಾದ ಬಿ.ಸಿ. ಚಂದ್ರಶೇಖರ್, ಬಿ.ಸಿ. ವಿವೇಕ್ ಮತ್ತಿತರರು ಉಪಸ್ಥಿತರಿದ್ದರು. ಕಲಾಕುಂಚ ಸಾಲಿಗ್ರಾಮ ಗಣೇಶ್‌ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published.