ಕ್ರಿಯಾಶಕ್ತಿ-ಜ್ಞಾನಶಕ್ತಿ-ಇಚ್ಛಾಶಕ್ತಿ ವೃದ್ಧಿಸಲಿ

ಕ್ರಿಯಾಶಕ್ತಿ-ಜ್ಞಾನಶಕ್ತಿ-ಇಚ್ಛಾಶಕ್ತಿ ವೃದ್ಧಿಸಲಿ

ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ

ದಾವಣಗೆರೆ, ನ.21- ಮನುಷ್ಯನಲ್ಲಿ ಕ್ರಿಯಾಶಕ್ತಿ, ಜ್ಞಾನಶಕ್ತಿ ಮತ್ತು ಇಚ್ಛಾಶಕ್ತಿ ವೃದ್ಧಿಸಲಿ ಎಂದು ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ನಗರದ ಕೆ.ಆರ್‌. ಮಾರುಕಟ್ಟೆಯ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಇಂದು ನಡೆದ ದೇವಸ್ಥಾನದ 30ನೇ ವಾರ್ಷಿಕೋತ್ಸವ ಮತ್ತು ಕಾರ್ತೀಕ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಕೊರೊನಾದಿಂದ ವರ್ತಕರು ಪೆಟ್ಟು ತಿಂದಿದ್ದಾರೆ. ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸಿದ್ದಾರೆ. 

ವಿನಾಯಕನು ಈ ಮಾರಕ ರೋಗವನ್ನು ದೇಶದಿಂದಲೇ ತೊಲಗುವಂತೆ ಮಾಡಲಿ ಎಂದು ಆಶಿಸಿದರು. ಈ ವರ್ಷ ರಾಜ್ಯದ ಜನತೆಗೆ ಕೊರೊನಾ, ಪ್ರವಾಹದಿಂದ ಆತಂಕವಾಗಿದ್ದು, ಸಂಕಟ ಅನುಭವಿಸಿ ದ್ದಾರೆ. ಈಗ ಕೊರೊನಾ ನಿಯಂತ್ರಣ ದಲ್ಲಿದೆ. ಪ್ರವಾಹ ಇಳಿಮುಖವಾಗಿದೆ. ರೈತರು ಆತಂಕದಿಂದ ದೂರವಾಗುತ್ತಿ ದ್ದಾರೆ. ಸರ್ಕಾರ ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕು, ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು, ರೈತರಿಗೆ ನೆಮ್ಮದಿಯ ಜೀವನ ಕಲ್ಪಿಸಬೇಕು ಎಂದರು.

ಸಮಾರಂಭದಲ್ಲಿ ಶ್ರೀ ಸಾಕ್ಷಿ ವರಸಿದ್ದಿ ವಿನಾಯಕ ಸೇವಾ ಸಮಿತಿ ಅಧ್ಯಕ್ಷ ಐರಣಿ ಬಕ್ಕೇಶ್‌, ಪದಾಧಿಕಾರಿಗಳಾದ ಹನುಮಂತಪ್ಪ, ರವಿಕುಮಾರ್‌, ರುದ್ರೇಶ್‌ ಜಾನಕಿ, ಮಾಲತೇಶ, ರಾಜು, ಬಾಳೇಕಾಯಿ ಶಿವಣ್ಣ, ಬಾಳೇಕಾಯಿ ಮುರುಗೇಶ್‌, ವೀರಭದ್ರಯ್ಯ, ನಾಗರಾಜ ಶೆಟ್ಟಿ, ನೀಲಕಂಠ ಪವಾರ್‌, ಹಲವಾಗಲು ಮಂಜುನಾಥ್‌, ಕರಿಬಸಯ್ಯ, ಅರ್ಚಕರಾದ ವೀರಯ್ಯ, ಬಸವರಾಜಯ್ಯ, ಪತ್ರಕರ್ತ ಬಕ್ಕೇಶ್‌ ನಾಗನೂರು,
ಜಿ.ಎಸ್. ವಿರೂಪಾಕ್ಷಪ್ಪ ಮತ್ತಿತರರಿದ್ದರು.

Leave a Reply

Your email address will not be published.