ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಅಧ್ಯಕ್ಷರಾಗಿ ಯಲ್ಲಪ್ಪ ರಡ್ಡಿ

ರಾಣೇಬೆನ್ನೂರು, ನ.21- ರಾಣೇಬೆನ್ನೂರು ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ರೂಪಾಂತರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಲ್ಲಪ್ಪರಡ್ಡಿ ಹನುಮಂತರಡ್ಡಿ ರಡ್ಡೇರ ಹಾಗೂ ಉಪಾಧ್ಯಕ್ಷರಾಗಿ ಬಡೇಸಾಬ್ ಫಕ್ಕೀರಸಾಬ್ ಹುಲ್ಮನಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಕ್ರಮ ಕುಲಕರ್ಣಿ ಘೋಷಣೆ ಮಾಡಿದರು.

ತಿರುಪತಿ ಶಿವಪ್ಪ ಅಜ್ಜನವರ್‌, ಮಳ್ಳಪ್ಪ ಗೂರಪ್ಪ ನಿಂಗಜ್ಜನವರ್, ರಾಮಪ್ಪ ಬಸಪ್ಪ ಹರಿಹರ, ಜಗದೇವರಡ್ಡಿ ಕರಬಸಪ್ಪ ಚೌರಡ್ಡಿ, ವೆಂಕಟೇಶ್ ಹನುಮಪ್ಪ ಸಾವುಕಾರ, ರತ್ನವ್ವ ಶಾಂತಯ್ಯ ಅಜ್ಜಿವಡಿಮಠ, ಸರೋಜಾ ಗುಡ್ಡಪ್ಪ ನ್ಯಾಮತಿ, ರಾಜೇಂದ್ರ ನಿಂಗಪ್ಪ ಅಂಬಿಗೇರ, ಬಸಪ್ಪ ಕೊಟ್ರಪ್ಪ ಮಾಳಿಗೇರ, ಬಸಪ್ಪ ಸಂಗಪ್ಪ ಸಿಡಗನಾಳ ಅವರುಗಳು ಮುಂದಿನ ಐದು ವರ್ಷದ ಅವಧಿಗೆ ಆಡಳಿತ ಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಿಸಿದರು.  ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಹಾಗೂ ಆಡಳಿತ ಮಂಡಳಿ ನಿರ್ದೇಶಕರುಗಳನ್ನು ಸಂಘದ ವ್ಯವಸ್ಥಾಪಕ ಮಹೇಶ್ವರ ಕೆಂಚರಡ್ಡಿ ಸನ್ಮಾನಿಸಿದರು.

Leave a Reply

Your email address will not be published.