2020-21ನೇ ಸಾಲಿನ ಹಿಂಗಾರು ಮತ್ತು ಬೇಸಿಗೆ ಹಂಗಾಮಿನ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸುವ ಸಂಬಂಧ ಹೆಚ್ಚಿನ ಪ್ರಚಾರ ನೀಡಿ, ವಿಮೆ ಮಾಡಿಸಬೇಕೆಂದು ಜಿಲ್ಲಾಧಿ ಕಾರಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯ
ಜಗಳೂರು : ಮಹಿಳೆಯರಿಗೆ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಸಮಾಜ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಪ್ರಿಯದರ್ಶಿನಿ ವಿಭಾಗದ ರಾಜ್ಯ ಸಂಚಾಲಕರಾದ ಭವ್ಯ ನರಸಿಂಹಮೂರ್ತಿ ಹೇಳಿದರು.
ಹರಪನಹಳ್ಳಿ ತಾ|| ನಲ್ಲಿ 8 ಕೋ. ರೂ.ಗಳ ಕಾಮಗಾರಿಗಳಿಗೆ ಸಂಸದರ ಚಾಲನೆ
ಹರಪನಹಳ್ಳಿ : ತಾಲ್ಲೂಕಿನ ವಿವಿಧೆಡೆ ಒಟ್ಟು 8 ಕೋಟಿ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ಮತ್ತು ಸಂಸದ ಜಿ.ಎಂ. ಸಿದ್ಧೇಶ್ವರ ಇಂದು ಚಾಲನೆ ನೀಡಿದರು.
ಕೂಡ್ಲಿಗಿ ಪ.ಪಂ.ನ ಮೊದಲ ಸಭೆಯಲ್ಲೇ ಸಮಸ್ಯೆಗಳ ಅನಾವರಣ
ಕೂಡ್ಲಿಗಿ ಪಟ್ಟಣದಲ್ಲಿ ಬೀದಿ ದೀಪಗಳಿದ್ದರೂ ಉರಿಯುತ್ತಿಲ್ಲ, ಚರಂಡಿಯಿದ್ದರೂ ಸ್ವಚ್ಛತೆ ಇಲ್ಲ, ಈಗ್ಗೆ ವರ್ಷದಿಂದ ಜನತೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೋಸಿ ಹೋಗಿದ್ದಾರೆ, ಈಗ ನಾವು ಸದಸ್ಯರಾಗಿದ್ದು ನಮ್ಮನ್ನು ಜನತೆ ಶಪಿಸುತ್ತಾರೆ.
ಪ್ರತಿ ಹಳ್ಳಿಗೆ ‘ಗ್ರಾಮ ಒನ್’ ಸೇವೆ
ದಾವಣಗೆರೆ : 750ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸುವ ಗ್ರಾಮ ಒನ್ ಕೇಂದ್ರವನ್ನು ಮುಂಬರುವ ದಿನಗಳಲ್ಲಿ ರಾಜ್ಯದ ಪ್ರತಿ ಹಳ್ಳಿಯಲ್ಲೂ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಶ್ರೀಮಂತ ಭಾಷೆಯಾಗಲು ಸಾಧ್ಯ
ಎಲ್ಲಾ ವೃತ್ತಿ ಕ್ಷೇತ್ರಗಳಲ್ಲೂ ಕನ್ನಡ ಬಳಕೆಯಾದರೆ ಮಾತ್ರ ಅದು ಶ್ರೀಮಂತ ಭಾಷೆಯಾಗಲು ಸಾಧ್ಯ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಬಾಪೂಜಿ ವಿದ್ಯಾಸಂಸ್ಥೆ ಶೈಕ್ಷಣಿಕ ನಿರ್ದೇಶಕರೂ ಆದ ಡಾ.ಎಂ.ಜಿ. ಈಶ್ವರಪ್ಪ ಪ್ರತಿಪಾದಿಸಿದರು.
ಶಿಕ್ಷಣ ’ಶೂನ್ಯ’ವಿಲ್ಲ, ವಿದ್ಯಾಗಮದ ಸುಧಾರಣೆ
ಕೊರೊನಾ ಕಾರಣದಿಂದಾಗಿ ಶಿಕ್ಷಣ §ಶೂನ್ಯ ವರ್ಷ'ವಾಗುವ ಸಾಧ್ಯತೆ ತಳ್ಳಿ ಹಾಕಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ವಿದ್ಯಾಗಮವನ್ನು ಇನ್ನಷ್ಟು ಸುಧಾರಣೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರ ಡಿಸಿಎಂಗೆ ಎಚ್ಚರಿಕೆ ನೀಡುವ ತಾಕತ್ತು ರಾಜ್ಯದ ಸಿಎಂಗಿಲ್ಲ
ಬೆಳಗಾವಿ, ಕಾರವಾರ ತಮ್ಮ ರಾಜ್ಯದ್ದು ಎಂಬುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಹೇಳಿಕೆ ನೀಡಿದರೂ ಎಚ್ಚರಿಕೆ ನೀಡುವ ತಾಕತ್ತು ನಮ್ಮ ರಾಜ್ಯದ ಮುಖ್ಯಮಂತ್ರಿಗೆ ಇಲ್ಲವಾಗಿದೆ.
ಡಿ.5ರ ಕರ್ನಾಟಕ ಬಂದ್ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ
ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮರಾಠ ಪ್ರಾಧಿಕಾರ, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಡಿಸೆಂಬರ್ 5ರಂದು ಕನ್ನಡಪರ ಸಂಘಟನೆಗಳು ನೀಡಿರುವ ಕರ್ನಾಟಕ ಬಂದ್ಗೆ ಅಖಿಲ ಭಾರತ ಹಿಂದೂ ಮಹಾಸಭಾ ಬೆಂಬಲ ಸೂಚಿಸಿದೆ.
ರಫ್ತು ಉದ್ದಿಮೆದಾರರ ಸಮಸ್ಯೆಗಳನ್ನು ನಿವಾರಿಸಲು ಕ್ರಮ
ಜಿಲ್ಲೆಯ ರಫ್ತು ಉದ್ದಿಮೆ ದಾರರ ಕುಂದು ಕೊರತೆಗಳನ್ನು ನಿವಾರಿಸಿ, ರಫ್ತಿಗೆ ಉತ್ತೇಜನ ನೀಡಲು ಜಿಲ್ಲಾ ಮಟ್ಟದ ರಫ್ತು ಉತ್ತೇಜನ ಸಮಿತಿಯನ್ನು ರಚಿಸಲಾಗಿದ್ದು, ಇನ್ನು ಮುಂದೆ ನಿಯ ಮಿತವಾಗಿ ಸಭೆ ಕರೆದು ರಫ್ತುದಾರರ ಅಹವಾಲುಗಳನ್ನು ಆಲಿಸಿ, ಸೂಕ್ತ ಕ್ರಮ ವಹಿಸಲಾಗುವುದು