ವಿಜಯನಗರಕ್ಕೆ ಕೂಡ್ಲಿಗಿ ಸೇರಿಸಿ

ಕೂಡ್ಲಿಗಿ, ನ 19 – ಕೂಡ್ಲಿಗಿ ತಾಲ್ಲೂಕನ್ನು ನೂತನವಾಗಿ ರಚನೆ ಯಾಗುವ ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡಲು ತಾಲ್ಲೂಕಿನ ಜನಪ್ರತಿನಿಧಿ ಗಳು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಸಿಎಂ ಯಡಿಯೂರಪ್ಪ ಅವರು ಇಚ್ಛಾ ಶಕ್ತಿ ತೋರಿಸುವ ಮೂಲಕ ಈ ತಾಲ್ಲೂಕಿನ ಜನತೆಗೆ ನ್ಯಾಯ ಒದಗಿಸಬೇಕೆಂದು ಕೂಡ್ಲಿಗಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಜರ್ಮಲಿ ಶಶಿಧರ್ ಒತ್ತಾಯಿಸಿದ್ದಾರೆ. 

ಕೂಡ್ಲಿಗಿ ತಾಲ್ಲೂಕು ಅತ್ಯಂತ ಹಿಂದುಳಿದ ಪ್ರದೇಶವಾಗಿದ್ದು ಇಲ್ಲಿಯ ಜನತೆ ಬಳ್ಳಾರಿಗೆ ಹೋಗಲು ದಿನಗಟ್ಟಲೇ ಕಾಲಾವಕಾಶ ಬೇಕು. ಆದರೆ, ವಿಜಯನಗರ ಜಿಲ್ಲೆಗೆ ಸೇರ್ಪಡೆ ಯಾದಲ್ಲಿ ಗಂಟೆಯೊಳಗೆ ಹೊಸಪೇಟೆ ತಲು ಪಲು ರಾಷ್ಟ್ರೀಯ ಹೆದ್ದಾರಿ ಅನುಕೂಲವಾಗಿದೆ. ಭೌಗೋಳಿಕವಾಗಿ ಹೊಸಪೇಟೆ ಹಾಗೂ ಕೂಡ್ಲಿಗಿ ಬಹಳ ಹತ್ತಿರವಾಗಿದ್ದು, ನೂರು ಕಿಲೋ ಮೀಟರ್ ದೂರದ ಬಳ್ಳಾರಿಗೆ ಹೋಗುವುದು ಕಷ್ಟ, ರಾತ್ರಿಯಾದರೆ ಸಾರಿಗೆ ಸಂಪರ್ಕ ಸಹ ಇಲ್ಲ. ಹೀಗಾಗಿ ಕೂಡ್ಲಿಗಿಯನ್ನು ವಿಜಯನಗರ ಜಿಲ್ಲೆಗೆ ಸೇರ್ಪಡೆ ಮಾಡುವುದು ಸೂಕ್ತ ಎಂದವರು ಹೇಳಿದ್ದಾರೆ.

Leave a Reply

Your email address will not be published.