ಉತ್ತರ ಬಿಜೆಪಿಯಿಂದ ಪ್ರಶಿಕ್ಷಣ ವರ್ಗ

ಉತ್ತರ ಬಿಜೆಪಿಯಿಂದ ಪ್ರಶಿಕ್ಷಣ ವರ್ಗ

ದಾವಣಗೆರೆ, ನ.19- ಉತ್ತರ ಬಿಜೆಪಿ ಮಂಡಲದ ವತಿಯಿಂದ ಬಿಜೆಪಿ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕರ್ತರುಗಳಿಗೆ ಪ್ರಶಿಕ್ಷಣ ವರ್ಗವನ್ನು  ರಾಷ್ಟ್ರೋತ್ಥಾನ ಶಾಲೆಯಲ್ಲಿ ನಡೆಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಅವರು ಪ್ರಶಿಕ್ಷಣವನ್ನು ಉದ್ಘಾಟಿಸಿದರು. ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್.ಶಿವಯೋಗಿಸ್ವಾಮಿ ಭಾಗವಹಿಸಿದ್ದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಶ್ರೀಮತಿ ಸುಧಾ ಜಯರುದ್ರೇಶ್, ಕಾರ್ಯದರ್ಶಿ ಬಿ. ಜಗದೀಶ್  ಅತಿಥಿಗಳಾಗಿದ್ದರು. ಉತ್ತರ ಮಂಡಲದ ಅಧ್ಯಕ್ಷ ಸಂಗನಗೌಡ್ರು ಅಧ್ಯಕ್ಷತೆ ವಹಿಸಿದ್ದರು.  ಉತ್ತರ ಮಂಡಲದ ಪ್ರಧಾನ ಕಾರ್ಯದರ್ಶಿ ಎನ್. ಹನುಮಂತಪ್ಪ  ಭಾಗವಹಿಸಿದ್ದರು. ನಾಳೆ ದಿನಾಂಕ 20ರಂದು ನಡೆಯಲಿರುವ ಪ್ರಶಿಕ್ಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಸಂಸದ ಜಿ. ಎಂ. ಸಿದ್ದೇಶ್ವರ. ಶಾಸಕ ಎಸ್. ಎ. ರವೀಂದ್ರನಾಥ್ ಭಾಗವಹಿಸಲಿದ್ದಾರೆ.

Leave a Reply

Your email address will not be published.