ಹರಿಹರ ಠಾಣೆ ಪಿಎಸ್ಐ ಆಗಿ ಸುನಿಲ್ ಬಸವರಾಜ್ ತೇಲಿ

ಹರಿಹರ, ನ.18- ಹರಿಹರ ನಗರ ಠಾಣೆಯ ಸಬ್ ಇನ್  ಸ್ಪೆಕ್ಟರ್ ಶ್ರೀಮತಿ ಶೈಲಶ್ರೀ ಅವರ ವರ್ಗಾವಣೆಯ ಬಳಿಕ ಖಾಲಿ ಉಳಿದಿದ್ದ ಆರಕ್ಷಕ ಉಪನಿರೀಕ್ಷಕ ಹುದ್ದೆಗೆ ಪ್ರಾಯೋಗಿಕ ತರಬೇತಿಯಲ್ಲಿದ್ದ ಸುನಿಲ್ ಬಸವರಾಜ್ ತೇಲಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಅವರು ಇಂದು ಅಧಿಕಾರ ಸ್ವೀಕರಿಸಿದರು.

ಮೂಲತಃ ವಿಜಯಪುರದವರಾದ ಸುನಿಲ್ ಅವರು, ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಾಯೋಗಿಕ ತರಬೇತಿ ಮುಗಿಸಿದ್ದಾರೆ.

ಈ ವೇಳೆ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಉತ್ತಮ ಕಾನೂನು-ಸುವ್ಯವಸ್ಥೆ ಕಾಪಾಡುವುದರ ಮುಖಾಂತರ ಜನಸ್ನೇಹಿ ಪೊಲೀಸ್ ಸೇವೆ ಅತಿ ಮುಖ್ಯವಾಗಿರುತ್ತದೆ. ಅಕ್ರಮ ಮದ್ಯ ಮಾರಾಟ, ಮಟ್ಕಾ, ಕ್ರಿಕೆಟ್ ಬೆಟ್ಟಿಂಗ್, ಅಪರಾಧ ಪ್ರಕರಣಗಳು ಹಾಗೂ ಬೈಕ್ ವ್ಹೀಲಿಂಗ್ ಮಾಡುವ ರೋಡ್ ರೋಮಿಯೋಗಳತ್ತ ಗಮನ ಹರಿಸಿ ಕ್ರಮ ಕೈಗೊಳ್ಳುವ ಮೂಲಕ, ಹರಿಹರ ಜಂಕ್ಷನ್ ಆಗಿರುವುದರಿಂದ ಹೆಚ್ಚು ವಾಹನಗಳ ದಟ್ಟಣೆ ಇರುತ್ತದೆ, ಸುಗಮ ಸಂಚಾರದ ಬಗ್ಗೆ ಗಮನಹರಿಸಿ ಕ್ರಮ ಜರುಗಿಸುತ್ತೇನೆ ಎಂದು ಹೇಳಿದರು.

Leave a Reply

Your email address will not be published.