ವೀರಶೈವ ಸಭಾದ ಮಹಿಳಾ ಘಟಕ ಸಂಭ್ರಮ

ವೀರಶೈವ ಸಭಾದ ಮಹಿಳಾ ಘಟಕ ಸಂಭ್ರಮ

ದಾವಣಗೆರೆ, ನ.18- ವೀರಶೈವ-ಲಿಂಗಾಯತ ಅಭಿವದ್ಧಿ ನಿಗಮ ರಚಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಿಸಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ವತಿಯಿಂದ ನಗರದಲ್ಲಿ ಇಂದು ಸಂಭ್ರಮಾಚರಿಸಲಾಯಿತು.

ಹರಳೆಣ್ಣೆ ಕೊಟ್ರಬಸಪ್ಪ ವೃತ್ತದಲ್ಲಿ ಜಮಾಯಿಸಿದ್ದ ಮಹಿಳಾ ಕಾರ್ಯಕರ್ತೆಯರು, ಮುಖ್ಯಮಂತ್ರಿ ಯಡಿಯೂರಪ್ಪ, ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರವುಳ್ಳ ಪೋಸ್ಟರ್ ಗಳನ್ನು ಹಿಡಿದು ಅವರುಗಳ ಪರವಾಗಿ ಜಯ ಘೋಷ ಹಾಕಿ ಸಿಹಿ ಹಂಚಿ ಸಂಭ್ರಮಿಸಿ, ಧನ್ಯವಾದ ಕೋರಿದರು. 

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ದೇವರಮನಿ ಶಿವಕುಮಾರ್, ನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ. ಪಾಟೀಲ, ಸ್ವಾಗಿ ಶಾಂತಕುಮಾರ್ ಮಾತನಾಡಿದರು.  

ಈ ಸಂದರ್ಭದಲ್ಲಿ ಮಹಾಸಭಾದ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಉಮಾ ಎಂ.ಪಿ. ರಮೇಶ್, ಶಿವಕುಮಾರ್, ಮಹಿಳಾ ಪ್ರಧಾನ ಕಾರ್ಯದರ್ಶಿ ದ್ರಾಕ್ಷಾಯಣಿ, ರಾಷ್ಟ್ರೀಯ ಉಪಾಧ್ಯಕ್ಷರಾದ ವಿನುತ ರವಿ, ಶೋಭಾ ಕೊಟ್ರೇಶ್, ಅಶ್ವಿನಿ ಪ್ರಶಾಂತ್, ದ್ರಾಕ್ಷಾಯಣಯಮ್ಮ ಮಲ್ಲಿಕಾರ್ಜುನ್, ಮಂಜುಳಾ ಮಹೇಶ್, ನಾಗರಾತ್ನ, ರೂಪಾ ಗುರು, ಮಂಗಳಾ, ಸುನೀತಾ, ರೇಖಾ, ಸುಮಾ, ಜೋತಿ ಬಸಪ್ಪ, ರಾಜೇಶ್ವರಿ ಉಮೇಶ್, ರತ್ನಾ  ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.