ಭುವಿಯ ಸ್ತಂಬನ
ಬದುಕಿದೂ ಕಂಪನ.
ಆಸೆ ನಿರಾಸೆಯ ಅಲೆ
ಬದುಕು ಕಾಮನಬಿಲ್ಲ ಬಲೆ.
ನಾಳೆಯ ಮರೀಚಿಕೆಯ ಕನಸಿನಲಿ
ಇಂದಿನ ಬೆಂಕಿ ಬಿಸಿಲ ದಾರಿ ಸವೆಸುತಲಿ.
ಭುವಿ ಕಂಪಿಸಿ
ಬಾಯ್ತೆರೆದು ಕಬಳಿಸಿ.
ಮತ್ತೆ ಶಾಂತ ಪ್ರಶಾಂತತೆಯ ತುತ್ತ ತುದಿ
ಎಲ್ಲೆಲ್ಲೂ ನೀರವತೆ ಸ್ವಾರ್ಥಿಗಳಿಲ್ಲದ ಪ್ರಶಾಂತತೆ.
ಅದುವೆ ಕಂಪನ
ಭುವಿಯ ಸ್ಪಂದನ.
ಭುವಿಯ ಒಂದು ಕಂಪನ
ಜೀವ ರಾಶಿಯ ತಲ್ಲಣ.
ಅಂದುಕೊ ಬಹುದೇನೋ
ಅದುವೇ ಪ್ರಳಯ ಕಂಪನ.
ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ
ನೀವೇ ತಾನೇ ಇದಕ್ಕೆಲ್ಲಾ ಕಾರಣ.
ಸುಕನ್ಯ ತ್ಯಾವಣಿಗೆ
9986328069
Leave a Reply