ಹುಚ್ಚು ಮಂಗಗಳು ಕಚ್ಚಿ ಗಾಯ

ಹೊನ್ನಾಳಿ, ನ.17- ಕಳೆದ ನಾಲ್ಕು ದಿನಗಳಿಂದ ಪಟ್ಟಣದ ದೊಡ್ಡಪೇಟೆ ಸುತ್ತಮುತ್ತ ಮೂರು ಹುಚ್ಚು ಹಿಡಿದ ಮಂಗಗಳು ಕಾಣಿಸಿಕೊಂಡು ಐದಾರು ಜನರಿಗೆ ಕಾಲು, ಕೈಗಳಿಗೆ ಕಚ್ಚಿ ಹಾನಿ ಮಾಡಿವೆ.

ಸೋಮವಾರ ಹಬ್ಬದ ದಿನದಂದು ವಿಷಯ ತಿಳಿದ ಪಟ್ಟಣ ಪಂಚಾಯ್ತಿ ಅಧಿಕಾರಿ ಗಳು, ಅರಣ್ಯಾಧಿಕಾರಿಗಳು ಸಂಜೆಯವರೆಗೂ ಮಂಗಗಳನ್ನು ಹಿಡಿಯಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೊಜನವಾಗಿಲ್ಲ. ಅಂದು ದೊಡ್ಡಪೇಟೆ ಚನ್ನೇಶ್ ಎಂಬುವವರ ಕಾಲಿಗೆ ಕಚ್ಚಿದ್ದಲ್ಲದೇ, ಮಂಗಳವಾರ ಮತ್ತೊಬ್ಬ ವ್ಯಕ್ತಿಯ ಕೈಗೆ ಕಚ್ಚಿದೆ. 

ಪಟ್ಟಣದ ಕೆಲವೇ ಪ್ರದೇಶಗಳಲ್ಲಿ ಮಂಗಗಳು ಓಡಾಡುತ್ತಿರುವುದರಿಂದ ಅಲ್ಲಿನ ಜನತೆ ಒಡಾಡಲು ಭಯಭೀತರಾಗಿದ್ದು, ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.

Leave a Reply

Your email address will not be published.