ಶಿಕ್ಷಕಿಯ ಚಿನ್ನಾಭರಣ ಅಪಹರಣ

ದಾವಣಗೆರೆ, ನ.17- ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಶಿಕ್ಷಕಿಯೋರ್ವರ ಬ್ಯಾಗ್‌ನಲ್ಲಿದ್ದ 4.69 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ಘಟನೆ ನಿನ್ನೆ ನಡೆದಿದೆ.ಮೌನೇಶ್ವರ ಬಡಾವಣೆಯ ಶಿಕ್ಷಕಿ ಕವಿತಾ ಅವರು ದೀಪಾವಳಿ ಹಬ್ಬಕ್ಕೆಂದು ತಮ್ಮ ತವರು ಮನೆ ಚನ್ನಗಿರಿ ತಾಲ್ಲೂಕಿನ ಮಿಯ್ಯಾಪುರಕ್ಕೆ ತೆರಳಿ ವಾಪಸ್ ಬಸ್ ನಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ನಗರದ ಹದಡಿ ರಸ್ತೆಯಲ್ಲಿ ಬಂದಿಳಿದಾಗ ಬ್ಯಾಗ್‌ನಲ್ಲಿನ ಚಿನ್ನಾಭರಣಗಳಿದ್ದ ಕವರ್ ಕಳುವಾಗಿರುವುದು ಗಮನಕ್ಕೆ ಬಂದಿದೆ ಎಂದು ಕವಿತಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ.  ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Leave a Reply

Your email address will not be published.