ಸಂಸದರು ಶ್ವೇತಪತ್ರ ಹೊರಡಿಸಲಿ: ಎಂ.ಎಸ್.ಕೆ. ಶಾಸ್ತ್ರಿ

ದಾವಣಗೆರೆ, ನ.13- ದಾವಣಗೆರೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವಂತೆ ಮನವಿ ಮಾಡಿದ್ದರೂ ಕೂಡ ಇದುವರೆಗೂ ಯಾವುದೇ ಹೆಜ್ಜೆ ಇಡದ ಸಂಸದ ಜಿ.ಎಂ. ಸಿದ್ದೇಶ್ವರ ಅವರು ರಾಜೀನಾಮೆ ನೀಡಲಿ. 

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಏಕೆ ಆಗಲಿಲ್ಲ ಎಂಬುದಕ್ಕೆ ಶ್ವೇತ್ರಪತ್ರ ಹೊರಡಿಸಬೇಕು ಎಂದು ದಾವಣಗೆರೆ ಎರಡನೇ ರಾಜಧಾನಿ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ. ಶಾಸ್ತ್ರಿ ಆಗ್ರಹಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 7 ವಿಮಾನ ನಿಲ್ದಾಣಗಳು ಕಾರ್ಯಾರಂಭಕ್ಕೆ ಅಣಿಯಾಗಿ ನಿಂತಿವೆ. ಆದರೆ, ಇದುವರೆಗೂ ದಾವಣಗೆರೆಯಲ್ಲಿ ವಿಮಾನ ನಿಲ್ದಾಣದ ಸೊಲ್ಲೇ ಇಲ್ಲ ಎಂದು  ಅವರು ದೂರಿದ್ದಾರೆ.

ಈ ಸಂಬಂಧ ಮೋದಿಜಿ, ಜೆ.ಪಿ. ನಡ್ಡಾ ಹಾಗೂ ಗೃಹ ಸಚಿವರಿಗೆ ಮನವರಿಕೆ ಮಾಡಲಾಗಿದೆ ಎಂದು ಶಾಸ್ತ್ರಿ ತಿಳಿಸಿದ್ದಾರೆ.

Leave a Reply

Your email address will not be published.