ಅವ್ಯವಸ್ಥೆಯ ಆಗರವಾದ ಕುಂದವಾಡ ಕೆರೆ: ದಿನೇಶ್ ಶೆಟ್ಟಿ ಆರೋಪ

ಅವ್ಯವಸ್ಥೆಯ ಆಗರವಾದ ಕುಂದವಾಡ ಕೆರೆ: ದಿನೇಶ್ ಶೆಟ್ಟಿ ಆರೋಪ

ದಾವಣಗೆರೆ, ನ.12- ನಗರದ ಜನತೆಗೆ ಜೀವನಾಡಿ ಎಂತಿರುವ ಕುಂದವಾಡ ಕೆರೆ ಇಂದು ಮಹಾನಗರ ಪಾಲಿಕೆಯ ನಿರ್ಲಕ್ಷ್ಯ ಧೋರಣೆಯಿಂದಾಗಿ ಮಲಿನಗೊಳ್ಳುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರು ದೂರಿದ್ದಾರೆ.

ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ದೂರದೃಷ್ಟಿ ಯಿಂದ ನಿರ್ಮಾಣವಾದ ಈ ಕೆರೆ, ಜಿಲ್ಲೆಯ ಜನತೆಯ ನೀರಿನ ದಾಹವನ್ನು ತೀರಿಸುತ್ತಿದ್ದು, ಇಂತಹ ಕೆರೆಯ ಆವರಣ ನಿರ್ವಹಣೆ ಇಲ್ಲದೇ ಅವ್ಯವಸ್ಥೆಯ ಆಗರವಾಗಿದೆ ಎಂದು ಆರೋಪಿಸಿದ್ದಾರೆ.

ಕುಂದುವಾಡ ಕೆರೆ ಕೇವಲ ನೀರು ಸರಬರಾಜು ಕೇಂದ್ರವಾಗಿರದೇ ವಾಯುವಿಹಾರಿಗಳಿಗೆ ಅನುಕೂಲವಾ ಗಿದೆ. ಜಿಲ್ಲಾಧಿಕಾರಿಗಳು ಸೇರಿದಂತೆ ಸಾವಿರಾರು ಜನರು ಪ್ರತಿನಿತ್ಯ ವಾಯುವಿಹಾರ ಮಾಡುತ್ತಿದ್ದಾರೆ. ಆದರೆ, ವಾಕಿಂಗ್‍ಪಾತ್‍ನಲ್ಲಿ ಸಾಕಷ್ಟು ಗಿಡ-ಗಂಟಿಗಳು ಬೆಳೆದು, ಹಾವು ಮುಂಗಸಿಗಳ ತಾಣವಾಗಿದೆ. ವಾಯುವಿಹಾರಿಗಳಿಗೆ ತೊಂದರೆ ಆಗಿದ್ದರೂ ಸಹ ಮಹಾನಗರ ಪಾಲಿಕೆ ಆಡಳಿತ ಕಂಡು ಕಾಣದಂತೆ ವರ್ತಿಸುತ್ತಿದೆ ಎಂದಿದ್ದಾರೆ.

ಭದ್ರಾ ನದಿಯಿಂದ ಕಾಲುವೆಗೆ ನೀರು ಹರಿಸಿದ್ದರೂ ಸಹ ಕೆರೆಯನ್ನು ತುಂಬಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದು, ನೀರು ಮಲಿನವಾಗುತ್ತಿದೆ. ಕೆರೆಯಲ್ಲೂ ಸಹ ಸಾಕಷ್ಟು ಗಿಡ-ಗಂಟಿಗಳು ಬೆಳೆದಿವೆ. ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯಾಗಲೀ, ಜಿಲ್ಲಾಡಳಿತವಾಗಲೀ ಕೆರೆಯನ್ನು ಶೀಘ್ರ ಸ್ವಚ್ವಗೊಳಿಸಿ, ನಾಗರಿಕರಿಗೆ ಶುದ್ಧ ಕುಡಿ ಯುವ ನೀರನ್ನು ಒದಗಿಸುವುದರ ಜೊತೆಗೆ ಕೆರೆಯ ವಾಕಿಂ ಗ್‍ಪಾತ್‍ನ್ನು ಸ್ವಚ್ವಗೊಳಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

Your email address will not be published.