ಬಿಜೆಪಿ ವಿಜಯೋತ್ಸವಕ್ಕೆ ಯಾದವ ಸಮಾಜದ ಮತಗಳು ಕಾರಣ

ದಾವಣಗೆರೆ, ನ.10- ಯಾದವ ಸಮಾಜವನ್ನು ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದದಂತೆ ನೋಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಯಾದವ ಸಮಾಜ ಬಾಂಧವರು ತಿರುಗೇಟು ನೀಡಿ, ಸಂಪೂರ್ಣ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂದು ಜಿಲ್ಲಾ ಯಾದವ ಮಹಾಸಭಾದ ಅಧ್ಯಕ್ಷ ಬಾಡದ ಆನಂದರಾಜ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. 

ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ  ಅತೀ ಹೆಚ್ಚು ಜನಸಂಖ್ಯೆ ಇರುವ ಯಾದವ ಸಮಾಜದವರು ಬಿಜೆಪಿಗೆ ಬೆಂಬಲಿಸಿದ್ದಾರೆ. ಸಿಎಂ ಯಡಿಯೂರಪ್ಪರವರು ಚುನಾವಣೆ ಸಂದರ್ಭ ದಲ್ಲಿ ಯಾದವ ಸಮಾಜವನ್ನು ಮೀಸಲಾತಿಗೆ ಒಳಪಡಿಸುತ್ತೇನೆ, ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಕ್ಕೆ ನಾಡಿನ ಯಾದವ ಬಂಧುಗಳು ಬಿಜೆಪಿ ಬೆಂಬಲಿಸಿದ್ದಾರೆ ಎಂದು  ಆನಂದರಾಜ್ ಹೇಳಿದ್ದಾರೆ.

Leave a Reply

Your email address will not be published.