ಕೊಟ್ಟೂರು : ಪಿಡಿಒ ಪುಷ್ಪಲತಾ ವಿರುದ್ಧ ಪ್ರತಿಭಟನೆ

ಕೊಟ್ಟೂರು : ಪಿಡಿಒ ಪುಷ್ಪಲತಾ ವಿರುದ್ಧ ಪ್ರತಿಭಟನೆ

ಕೊಟ್ಟೂರು, ನ.10- ಉದ್ಯೋಗ ಖಾತ್ರಿ ಯೋಜನೆಯು ಸಮರ್ಪಕವಾಗಿ ನೆರವೇರಿಲ್ಲ. ಇಲ್ಲಿನ ಪಿಡಿಒ ಪುಷ್ಪಲತಾ ಅವರು ನರೇಗಾ ಯೋಜನೆಯ ಅನುದಾನವನ್ನು  ದುರುಪಯೋಗಪಡಿಸಿಕೊಂಡಿದ್ದಾರೆ  ಎಂದು ಆರೋಪಿಸಿ, ಹ್ಯಾಳ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಲೊಟ್ಟನಕೆರೆ, ಮಲ್ಲನಾಯಕನಹಳ್ಳಿ ಗ್ರಾಮಸ್ಥರು ತಾಲ್ಲೂಕು ಪಂಚಾಯಿತಿ ಎದುರು ನಿನ್ನೆ ಪ್ರತಿಭಟಿಸಿದರು.

 ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಸಿಇಒ ಮತ್ತು  ಅಧ್ಯಕ್ಷ ಗುರುಮೂರ್ತಿ ಅವರಿಗೆ ಮನವಿ ಸಲ್ಲಿಸಿದರು. 

ರೈತ ಸಂಘದ ಅಧ್ಯಕ್ಷ ಮಂಜುನಾಥ, ದೇವೆಂದ್ರಪ್ಪ, ಅಂಜಿನಪ್ಪ, ಪಿ.ಹೆಚ್. ಆಂಜನೇಯ, ಶ್ರೀನಿವಾಸ, ವೆಂಕಪ್ಪ, ಗಾಳೆಪ್ಪ, ಕೊಟ್ರೇಶ್, ಜಯಣ್ಣ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.