ಉಪ ಚುನಾವಣೆಯಲ್ಲಿ ಬಿಜೆಪಿಗೆ ಹಣದ ಹೊಳೆ ಹರಿಸಿ ಗೆಲುವು

ದಾವಣಗೆರೆ, ನ.10- ಶಿರಾ ಹಾಗೂ ರಾಜರಾಜೇ ಶ್ವರಿ ವಿಧಾನಸಭಾ ಉಪಚುನಾವಣೆಯಲ್ಲಿ ಸರ್ಕಾರದ ಆಡಳಿತ ಯಂತ್ರ ದುರುಪಯೋಪಡಿಸಿಕೊಂಡು ಹಣದ ಹೊಳೆ ಹರಿಸಿ, ಬಿಜೆಪಿ ಗೆಲುವು ಸಾಧಿಸಿದೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ್ ಪ್ರತಿಕ್ರಿಯಿಸಿದ್ದಾರೆ.

ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆಗೆ ಹಲವು ಕಾರಣಗಳಿದ್ದು, ಅವುಗಳಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯ ರ್ಥಿಗಳನ್ನು ಕಣಕ್ಕೆ ಇಳಿಸದೆ ಬಿಜೆಪಿಗೆ ಅನುಕೂಲಕರವಾದ ಅಭ್ಯರ್ಥಿಗಳನ್ನು ಹಾಕಿದೆ. ಸಾಮಾನ್ಯವಾಗಿ ರಾಜ್ಯದಲ್ಲಿ ಆಡಳಿತ ಪಕ್ಷದ ಸರ್ಕಾರವಿದ್ದಾಗ ಆ ಪಕ್ಷದ ಅಭ್ಯರ್ಥಿಗಳೇ ಉಪ ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ. ಮುಖ್ಯಮಂತ್ರಿಗಳು ಶಿಕಾರಿಪುರದಂತೆ ಶಿರಾವನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತೇನೆ. 6 ತಿಂಗಳಲ್ಲಿ ಕೆರೆಗೆ ನೀರು ಹರಿಸುವುದಾಗಿ ಭರವಸೆ ನೀಡಿ ಜನರನ್ನು ಭ್ರಮೆಯಲ್ಲಿ ತೇಲಿಬಿಟ್ಟರು. ಮುಖ್ಯಮಂತ್ರಿ ಬಿಎಸ್‌ವೈ ಪುತ್ರ ವಿಜಯೇಂದ್ರ ಮತಕ್ಕೆ ಸಾವಿರ, ಎರಡು ಸಾವಿರ ರೂ. ತನಕ ಹಂಚಿಕೆ ಮಾಡಿದ್ದು, ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಬಿಜೆಪಿಗೆ ಈ ಗೆಲುವು ತಾತ್ಕಾಲಿಕ. 2023 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೇ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.