ಉಪ ಚುನಾವಣೆಯಲ್ಲಿ ಗೆಲುವು : ಬಿಜೆಪಿ ವಿಜಯೋತ್ಸವ

ಉಪ ಚುನಾವಣೆಯಲ್ಲಿ ಗೆಲುವು : ಬಿಜೆಪಿ ವಿಜಯೋತ್ಸವ

ದಾವಣಗೆರೆ, ನ.10- ಆರ್ ಆರ್ ನಗರ, ಶಿರಾ‌ ಮತ್ತು ಬಿಹಾರ್ ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಸಾಧಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಜಿಲ್ಲಾ ಬಿಜೆಪಿಯಿಂದ ವಿಜಯೋತ್ಸವ ಆಚರಿಸಲಾಯಿತು.

ಬಿಜೆಪಿ ಕಚೇರಿ ಮುಂಭಾಗ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ನೇತೃತ್ವದಲ್ಲಿ ಸಿಹಿ ಹಂಚಿದರಲ್ಲದೇ, ಸಿಹಿ ವಿನಿಮಯ ಮಾಡಿಕೊಂಡು ಗೆಲುವಿನ ನಗೆಯೊಂದಿಗೆ ವಿಜಯದ ಸಂಕೇತ ಪ್ರದರ್ಶಿಸುತ್ತಾ ಹರುಷ ವ್ಯಕ್ತಪಡಿಸಿದರು.

ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಿಳಾ ಮೋರ್ಚಾದ ಪುಷ್ಪಾ ವಾಲಿ, ಪಾಲಿಕೆ ಸದಸ್ಯರುಗಳಾದ ಸೋಗಿ ಶಾಂತ ಕುಮಾರ್, ಶಿವನಗೌಡ ಪಾಟೀಲ್, ದೇವೀರಮ್ಮ, ಗಾಯತ್ರಿ ಖಂಡೋಜಿರಾವ್, ರಾಕೇಶ್ ಜಾಧವ್, ಆರ್.ಎಲ್. ಶಿವಪ್ರಕಾಶ್, ಕಾರ್ಯದರ್ಶಿ ಜಗದೀಶ್, ಮುಖಂಡರಾದ ಸಂಗನಗೌಡ್ರು, ಉಮೇಶ ಪಾಟೀಲ್ ಮತ್ತಿತರರು ವಿಜಯೋತ್ಸವದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published.