ಅನರ್ಬ್ ಬಂಧನ ಖಂಡಿಸಿ ಪ್ರತಿಭಟನೆ

ಅನರ್ಬ್ ಬಂಧನ ಖಂಡಿಸಿ ಪ್ರತಿಭಟನೆ

ದಾವಣಗೆರೆ, ನ.7- ರಾಷ್ಟ್ರವಾದಿ ಪತ್ರಕರ್ತ ಅನರ್ಬ್ ಗೋ ಸ್ವಾಮಿ ಅವ ರನ್ನು ಅಸಂವಿ ಧಾನಿಕವಾಗಿ ಬಂಧಿಸಿರು ವುದನ್ನು ಖಂಡಿಸಿ, ನಗರ ದಲ್ಲಿ ಹಿಂದೂ ಜಾಗರಣ ವೇದಿಕೆ ವತಿಯಿಂದ ನಿನ್ನೆ ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಸಂಜೆ ಜಮಾಯಿಸಿದ್ದ ವೇದಿಕೆ ಪದಾಧಿಕಾರಿಗಳು, ಮಹಾರಾಷ್ಟ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ವೇದಿಕೆಯ ವಿಭಾಗ ಸಂಪರ್ಕ ಪ್ರಮುಖ್ ಸತೀಶ್ ಪೂಜಾರಿ, ಪ್ರಾಂತ ಅಧ್ಯಕ್ಷ ಎಸ್. ಜಯಕುಮಾರ್, ವಿನಾಯಕ ರಾನಡೆ, ಜಯಣ್ಣ, ಗಣೇಶ್, ಕಲ್ಲೇಶ್, ವೀರೇಶ್, ಮಂಜುನಾಥ್, ಚೇತನ್, ಯೋಗೇಶ್, ಗಣೇಶ್, ಎಸ್. ಕುಮಾರ, ಕಿರಣ್, ದ್ಯಾಮೇಶ್, ಕೃಷ್ಣಮೂರ್ತಿ, ರಂಗಸ್ವಾಮಿ, ಅಣ್ಣಪ್ಪ, ನಂದಕುಮಾರ್, ನಾಗರಾಜ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.