ಬೆಳ್ಳೂಡಿ ಸಿದ್ದವೀರಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ

ಬೆಳ್ಳೂಡಿ ಸಿದ್ದವೀರಪ್ಪ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ

ಹರಿಹರ, ನ.3- ಬೆಳ್ಳೂಡಿ ಗ್ರಾಮದ ಎ. ಸಿದ್ದವೀರಪ್ಪ ಅವರು ಹರಿಹರ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. 

ಭಾನುವಳ್ಳಿಯ ಆರ್.ಸಿ. ಪಾಟೀಲ್ ಅವರ ರಾಜೀನಾಮೆಯಿಂದಾಗಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಗೆ ಸಹಕಾರ ಅಭಿವೃದ್ಧಿ ಅಧಿಕಾರಿ ಎನ್.ಜಿ. ರುದ್ರಪ್ಪ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಬ್ಯಾಂಕಿನ ವ್ಯವಸ್ಥಾಪಕರಾದ ಓ.ಎನ್. ನಿರ್ಮಲ ಸಹಕರಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಗುತ್ತೂರಿನ ಕೆ. ರವೀಂದ್ರನಾಥ್, ನಿರ್ದೇಶಕರಾದ ಮಲೇಬೆನ್ನೂರಿನ ಸಿರಿಗೆರೆ ರಾಜಣ್ಣ, ಯಲವಟ್ಟಿ ಜಿ. ಆಂಜನೇಯ, ಗುತ್ತೂರು ಹೆಚ್. ಚಂದ್ರಪ್ಪ, ಧೂಳೆಹೊಳೆ ಹೆಚ್. ವಾಮದೇವಪ್ಪ, ಹರಿಹರ ಹೆಚ್.ಕೆ. ನಾಗರಾಜ್, ಆರ್.ಬಿ. ವಿಜಯಲಕ್ಷ್ಮಿ, ಹನಗವಾಡಿಯ ಬಣಕಾರ ಪ್ರಸನ್ನ, ಹೊಳೆಸಿರಿಗೆರೆ ಕೆ.ಎಂ. ಬಸವರಾಜಪ್ಪ, ಹಳ್ಳಿಹಾಳ್ ಹೆಚ್.ಜಿ. ಧರ್ಮರಾಜ್, ಕೊಕ್ಕನೂರು ಅಂಜಿನಮ್ಮ, ಕೊಂಡಜ್ಜಿ ಸುಧಾ, ನಾಮನಿರ್ದೇಶಕ ವಾಸನದ ಎನ್. ಅಶೋಕ್ ಹಾಜರಿದ್ದು, ಅವಿರೋಧ ಆಯ್ಕೆಗೆ ಸಮ್ಮತಿಸಿದರು.

ನೂತನ ಅಧ್ಯಕ್ಷರನ್ನು ಮಾಜಿ ಶಾಸಕ ಬಿ.ಪಿ. ಹರೀಶ್, ಹಿರಿಯ ಮುಖಂಡ ಎನ್.ಜಿ. ನಾಗನಗೌಡ್ರು, ತಾಲ್ಲೂಕು ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟದ ಲಿಂಗರಾಜ್, ಗೌಡ್ರ ಶೇಖರಪ್ಪ, ಗೌಡ್ರ ಮಲ್ಲೇಶಪ್ಪ, ಮುದೇಗೌಡ್ರ ಪ್ರಭು, ಬೆಳ್ಳೂಡಿಯ ಗಂಗಾಧರಪ್ಪ ಹಾಗೂ ಇನ್ನಿತರರು ಅಭಿನಂದಿಸಿದರು.