ರಾಷ್ಟ್ರೀಯ ಏಕತಾ ದಿನ, ವಾಲ್ಮೀಕಿ ಜಯಂತಿ ಆಚರಣೆ

ರಾಷ್ಟ್ರೀಯ ಏಕತಾ ದಿನ,  ವಾಲ್ಮೀಕಿ ಜಯಂತಿ ಆಚರಣೆ

ದಾವಣಗೆರೆ, ಅ.31- ಜಿಲ್ಲಾಡಳಿತದ ವತಿಯಿಂದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾರತ ಏಕೀಕರಣ ಪಿತಾಮಹ ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಮರಣಾರ್ಥ ಪ್ರತಿಜ್ಞಾ ವಿಧಿ  ಹಾಗೂ ದಾರ್ಶನಿಕ ಸಂತ ವಾಲ್ಮೀಕಿ ಜಯಂತಿಯನ್ನು ಇಂದು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪದ್ಮ ಬಸವಂತಪ್ಪ ಹಾಗೂ ವಿವಿಧ ಸಮಾಜಗಳ ಮುಖಂಡರು ಪುಷ್ಪಾರ್ಚನೆಯ ಮೂಲಕ ವಾಲ್ಮೀಕಿ ಭಾವಚಿತ್ರಕ್ಕೆ ವಂದಿಸಿದರು. 

ನಂತರ ರಾಷ್ಟ್ರೀಯ ಏಕತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮಿಕಾಂತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸುರೇಶ್ ರೆಡ್ಡಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ರವಿ, ನಾಯಕ ಸಮಾಜದ ಆಂಜನೇಯ, ಗುಮ್ಮನೂರು ಮಲ್ಲಿಕಾರ್ಜುನ್, ವೀರಣ್ಣ, ಹದಡಿ ಹಾಲಪ್ಪ, ಶ್ಯಾಗಲೆ ಸತೀಶ್, ಮಂಜುನಾಥ್ ಇದ್ದರು.

Leave a Reply

Your email address will not be published.