ನೀನು ನೆಪ ಮಾತ್ರ

ನೀನು ನೆಪ ಮಾತ್ರ

ಗೆಳೆತಿ
ನೀನು ನೆಪ ಮಾತ್ರ
ನನ್ನ ಭಾವಗಳು ಉತ್ಕಟ
ಹರಿವ ಮಹಾಪೂರ
ಸ್ನೇಹ ಪ್ರೀತಿಯ ಅಲೆಗಳು
ದಡಕ್ಕೆ ಅಪ್ಪಳಿಸುತ್ತಿವೆ
ಮರುಳ   ಮೇಲೆ
ನಿನ್ನ ಹೆಜ್ಜೆ ಗುರುತುಗಳು.
ಅಲ್ಲಲ್ಲಿ ಚೆದುರಿದ ಸಿಂಪಿ.
ಮೇಲೆ ಹಾರಿ
ಗಾಳಿ ಸವೆವ ಮೀನು
ಮರದ ಪೊದರಿನಲಿ
ಹಕ್ಕಿಯ ಕಲರವ
ಸೂರ್ಯ ಮುಳುಗುತ್ತಾನೆ.
ದೀಪ ಆರುತ್ತವೆ
ನಿಶ್ಯಬ್ದ  ಎಲ್ಲರೂ  ಮಲಗುತ್ತಾರೆ
ಆದರೆ  ಗೆಳೆತಿ
ನನ್ನ ಮುಗ್ಧ ಭಾವಗಳು
ಮಲಗುವುದಿಲ್ಲ.
ಹೆಜ್ಜೆ ಹೆಜ್ಜೆಗೆ
ನಿನ್ನ ನೆನೆಯುತ್ತವೆ.
ಭಾವ ಅರಳುತ್ತವೆ
ಕವನ ಕಟ್ಟುತ್ತವೆ
ನೀನು ನೆಪ ಮಾತ್ರ .
ಸ್ನೇಹ ಪ್ರೀತಿಗೆ ಶೋಧ.
ಬದುಕು ಕಟ್ಟುತ್ತವೆ
ನಿನ್ನ ನೆನಪಿನ ಕ್ಷಣಗಳು


ಡಾ.ಶಶಿಕಾಂತ.ಪಟ್ಟಣ 
ಪುಣೆ.
dr.shashikant.pattan@gmail.com