ವಿಶ್ವಮಾನ್ಯ ಬಾಪು

ವಿಶ್ವಮಾನ್ಯ ಬಾಪು

ಭಾರತ ದೇಶದ ಸ್ವಾತಂತ್ರ್ಯಕಾಗಿ
ಹೋರಾಡಿದರು ಗಾಂಧೀಜಿ
ಮಹಾತ್ಮರೆಂದು ಖ್ಯಾತಿಯ ಪಡೆದ
ಅವರೇ ನಮ್ಮಯ ಬಾಪೂಜಿ.

ಸತ್ಯ, ಅಹಿಂಸೆ, ಶಾಂತಿಯ ದೂತ
ತ್ಯಾಗ, ಬಲಿದಾನಗಳ ಸಂಕೇತ
ಎಲ್ಲರ ನೆಚ್ಚಿನ ಗಾಂಧಿ ತಾತ
ಅವರೇ ಹೆಮ್ಮೆಯ ರಾಷ್ಟ್ರ ಪಿತ.

ಅಸ್ಪೃಶ್ಯತೆಯ ನಿರ್ಮೂಲನೆಗೆ
ಪಣತೊಟ್ಟರು ಈ ನೇತಾರ
ವರ್ಣಭೇದ ನೀತಿಯನು ಖಂಡಿಸಿದ
ಅವರೇ ರಾಷ್ಟ್ರದ ಸರದಾರ.

ಚರಕದಿ ನೂಲನು ತೆಗೆದು ದೇಶದಲಿ
ತಯಾರಿಸಿದರು ಖಾದಿ
ಸ್ವದೇಶಿ ವಸ್ತ್ರದ ಮಹತ್ವ ಸಾರಿದ
ಅವರೇ ಮಹಾತ್ಮಾ ಗಾಂಧಿ.

ಸತ್ಯಾಗ್ರಹ, ಚಳುವಳಿಗಳ ನಡೆಸುತ
ಮೂಡಿಸಿ ತಮ್ಮಯ ಛಾಪು
ಸ್ವಾತಂತ್ರ್ಯ ಜ್ಯೋತಿಯ ಬೆಳಗಿಸಿದವರು
ಅವರೇ ನಲ್ಮೆಯ ಬಾಪು.

ಸರಳ ಸಜ್ಜನಿಕೆ ಮೈಗೂಡಿಸಿದ
ವ್ಯಕ್ತಿತ್ವವೇ ಅಸಾಮಾನ್ಯ
ಸತತ ಪರಿಶ್ರಮ, ಸಾಧನೆಯಿಂದ
ಆದರು ವಿಶ್ವ ಮಾನ್ಯ.


ಜಿ.ಎಸ್.ಗಾಯತ್ರಿ, ಶಿಕ್ಷಕಿ
ಬಾಪೂಜಿ ಶಾಲೆ, ಹರಿಹರ
83108 77083

Leave a Reply

Your email address will not be published.