ಗಾನ ಗಾರುಡಿಗನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಗಾನ ಗಾರುಡಿಗನಿಗೆ ಭಾವಪೂರ್ಣ ಶ್ರದ್ಧಾಂಜಲಿ

ಚತುರ್ಭಾಷಾ ಗಾಯಕ ಬಾಲಸುಬ್ರಹ್ಮಣ್ಯ
ಅಜಾತಶತ್ರುವಾಗಿ ಮೆರೆದು ಆದರು ವರೇಣ್ಯ
ಸಂಗೀತ ಸೇವೆಗೈದ ಇವರ ಬಾಳು ಧನ್ಯ
ಇಂಥವರನು ಪಡೆದುದು ನಮ್ಮೆಲ್ಲರ ಪುಣ್ಯ.

ಸಂಗೀತವ ಉಸಿರಾಗಿಸಿಕೊಂಡ ಗಾನ ಕೋಗಿಲೆ
ಹಾರಿಹೋಯಿತೇಕೆ ಇಂದು ಹೀಗೆ ಒಮ್ಮೆಲೆ
ಅಭಿಮಾನಿಗಳು ಸಲ್ಲಿಸಿದಾ ಹರಕೆ ಹಾರೈಕೆ
ಪೂಜೆಗಳು ಇಂದು ಫಲಿಸಲಿಲ್ಲವೇಕೆ?

ಪ್ರಶಸ್ತಿಗಳ ಸರಮಾಲೆಯ ಧರಿಸಿದಾ ಧೀಮಂತ
ಸಂಗೀತ ಲೋಕಕೆ ಇವರ ಸೇವೆ ಅನಂತ
ದೇವರಿಗೆ ಬೇಕು ಇಂಥ ಹೃದಯವಂತ
ಅದಕಾಗಿ ತನ್ನ ಬಳಿ ಕರೆಸಿಕೊಂಡ ಭಗವಂತ.

ಎದೆ ತುಂಬಿ ಹಾಡಿದ ಸ್ವರಮಾಂತ್ರಿಕನಿಗೆ
ಸಲ್ಲಿಸುವೆವು ಭಾವಪೂರ್ಣ ಶ್ರದ್ಧಾಂಜಲಿ
ಗಾಯನವ ನಿಲ್ಲಿಸಿದ ಗಾನ ಗಂಧರ್ವನಿಗೆ
ಕನ್ನಡಿಗರ ಹೃದಯಪೂರ್ಣ ಭಾಷ್ಪಾಂಜಲಿ.


ಜಿ.ಎಸ್.ಗಾಯತ್ರಿ, ಶಿಕ್ಷಕಿ
ಬಾಪೂಜಿ ಶಾಲೆ, ಹರಿಹರ
83108 77083