ಹೀಗಿರಬೇಕು ಪ್ರತಿ ಹೆಣ್ಣು…

ಹೀಗಿರಬೇಕು ಪ್ರತಿ ಹೆಣ್ಣು…

ಬೇಕೇ ಇವರಿಗೆ ಪೀಠಿಕೆ
ಏಕೆ ಬೇಕು ಹೋಲಿಕೆ
ವಿದ್ಯಾವಂತ ಗುಣವಂತೆ ಒಬ್ಬಾಕೆ
ಓದು ಬರಹ ತಿಳಿಯದ ಮತ್ತೊಬ್ಬಾಕೆ.

ಕರ್ನಾಟಕದ ಹೆಮ್ಮೆಯ ವನಿತೆಯರು
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು
ಇಬ್ಬರು ಪ್ರಭಾವಿ ಮಹಿಳೆಯರು
ವಿಶ್ವಕ್ಕೆ ಮಾದರಿಯಾದ ಅಮ್ಮಂದಿರು.

ಅತೀ ಬುದ್ದಿವಂತೆ, ಬರಹಗಾರ್ತಿ
ಉದ್ಯಮಿ, ಸಮಾಜ ಸೇವೆಗೆ ಸ್ಪೂರ್ತಿ
ಸರಳತೆಯ ದೇಹದಲ್ಲಿ ತುಂಬು ಪ್ರೀತಿ
ಅವರೇ ನಮ್ಮ ಸುಧಾಮೂರ್ತಿ.

ಕೂಲಿ ಮಾಡುತ್ತಾ ಗಿಡ ನೆಟ್ಟ ಛಲವಂತೆ
ಮರಗಿಡಗಳಿಗೆ ತೋರಿದಳು ತನ್ನ ಮಮತೆ
ಸಾವಿರಾರು ಮರಗಳಿಗೆ ಈಕೆ ಅಮ್ಮನಂತೆ
ಇದು ನಮ್ಮ ಸಾಲು ಮರದ ತಿಮ್ಮಕ್ಕನ ಕತೆ.
ಕುಟುಂಬಕ್ಕವಳು ಕಣ್ಣು ಹೀಗಿರಬೇಕು ಪ್ರತಿ ಹೆಣ್ಣು…


ಅನುಪಮ ವಿರೂಪಾಕ್ಷಪ್ಪ
ದಾವಣಗೆರೆ.