ರಂಭಾಪುರಿ ಶ್ರೀಗಳಿಂದ ಶ್ರಾವಣಮಾಸದ ಇಷ್ಟಲಿಂಗ ಪೂಜೆ

ವಿಶ್ವಶಾಂತಿ ಹಾಗೂ ಲೋಕ ಕಲ್ಶಾಣಾರ್ಥಕವಾಗಿ  ಬಾಳೆಹೊನ್ನೂರು ಶ್ರೀಮದ್ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು ಶ್ರಾವಣ ಮಾಸದ ಇಷ್ಟಲಿಂಗ ಮಹಾಪೂಜಾ ತಪೋನುಷ್ಠಾನ ಕೈಗೊಂಡಿದ್ದಾರೆ.

ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರ ಮಾಸವಾಗಿದ್ದು ಪ್ರಸನ್ನ ಚಿತ್ತದ ಭಕ್ತಿಯ ಸಂಗಮವಾಗಿದೆ. ಮನುಜನಿಗಷ್ಟೇ ಅಲ್ಲದೇ ಪ್ರಕೃತಿ ಮಾತೆ ಕೂಡಾ ಹಬ್ಬದ ಸಂಭ್ರಮಕ್ಕೆ ಅಣಿಯಾಗುವ ಮಾಸವಾಗಿದೆ. ಹಾಗಾಗಿ ಶ್ರಾವಣವೆಂದರೆ ಶ್ರೇಷ್ಟತೆಗೂ ಶುಭಕ್ಕೂ ಪರ್ಯಾಯವೆಂಬ ನಂಬಿಕೆ ಎಲ್ಲರಲ್ಲೂ ಮನೆ ಮಾಡಿದೆ.

ನಮ್ಮ ಪ್ರಾಚೀನ ಪರಂಪರೆಯ ದೇಶಕ್ಕೆ ಪ್ರಕೃತಿಯೇ ಒದಗಿಸಿರುವ ವರವೆಂದರೆ ಋತುಗಳ ವೈವಿಧ್ಯತೆ ಆರು ಋತುಗಳ ಕಾಲಚಕ್ರ ಜನರ ಜೀವನ ಶೈಲಿಯನ್ನು ರೂಪಿಸಿದೆ. ಅಲ್ಲದೇ ಶ್ರೀಮಂತವಾದ ಧಾರ್ಮಿಕ – ಸಾಂಸ್ಕೃತಿಕ ವೈಭವವನ್ನು ಒದಗಿಸಿವೆ. ಶ್ರವಣ ನಕ್ಷತ್ರದ ಯೋಗದಿಂದ  ಶ್ರಾವಣ ಶಬ್ಧ ಬಂದಿದ್ದು ಈ ಮಾಸದಲ್ಲಿ  ಶಿವ – ವಿಷ್ಣು ಮೊದಲಾದ ಇಷ್ಟ ದೇವರುಗಳನ್ನು ವಿಶೇಷ ವಾಗಿ ಆರಾಧಿಸಲಾಗುತ್ತಿದೆ. ಶ್ರಾವಣ ಮಾಸದ ಪ್ರತಿ ದಿನವೂ ಧಾರ್ಮಿಕ ಮಹತ್ವವನ್ನು ಹೊಂದಿದ್ದು  ಭಕ್ತರಿಗೆ  ಸಾಧಕರಿಗೆ ಆಧ್ಯಾತ್ಮಿಕ ಅನುಗ್ರಹ ಲಭಿಸಿ, ವ್ಶಕ್ತಿಗಳ ದೈಹಿಕ – ಮಾನಸಿಕ ಆರೋಗ್ಶ ಸುಧಾರಿಸಿ ನಕಾರಾತ್ಮಕ ಶಕ್ತಿಗಳು ದೂರವಾಗಿ ಇಚ್ಫಾಶಕ್ತಿ ಮತ್ತು ಸ್ಮರಣ ಶಕ್ತಿ ಲಭಿಸಿ ಇಷ್ಟಾರ್ಥ ಸಿದ್ಧಿಯನ್ನು ಪಡೆಯ ಬಹುದಾಗಿದೆ.

ಭಾರತೀಯ ಪರಂಪರೆಯಲ್ಲಿ ಅತಿಮುಖ್ಶ ವಾಹಿನಿಯಾಗಿರುವ ಹಿಂದೂ ಸಂಸ್ಕೃತಿಯಲ್ಲಿ  ಇಷ್ಟದೈವ ಪದ ಬಳಕೆಯಲ್ಲಿರುವುದು ಸರ್ವರಿಗೂ ತಿಳಿದ ವಿಷಯವಾಗಿದ್ದರೂ ಕೂಡಾ ವೀರಶೈವ ಧರ್ಮದಲ್ಲಿ ಇಷ್ಟಲಿಂಗ ಮಹಾಪೂಜೆಯ ಮೂಲಕ ತನ್ನ ಆತ್ಮದರ್ಶನ ಹೊಂದಿ ಶಿವ ಸಾಕ್ಷಾತ್ಕಾರ ಪಡೆಯುವ ಶ್ರೇಷ್ಟತೆಯನ್ನು ನಾವು ಕಾಣಬಹುದಾಗಿದೆ. ಇಷ್ಟಲಿಂಗ ಮಹಾಪೂಜೆಯು ಪರಶಿವನ ಕುರುಹಿನ ಪೂಜೆಯೇ ಆಗಿದ್ದು ಶಿವನು ದೇವಾಧಿದೇವತೆಗಳಲ್ಲಿ ಅಗ್ರಗಣ್ಯನೂ, ಲೋಕಪ್ರಸಿದ್ದನೂ, ತ್ರಿಮೂರ್ತಿಗಳಲ್ಲೇ ಪ್ರಮುಖನಾಗಿದ್ದು, ಸರ್ವಭಕ್ತರ ಸಂಕಷ್ಟಗಳನ್ನು ಪರಿಹರಿಸುವ ಕರುಣಾಮಯಿಯಾಗಿದ್ದಾನೆ.

ಶಿವನ ಅನಂತ ಲೀಲೆಗಳಲ್ಲಿ ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವೂ ಕೂಡಾ ಶ್ರಾವಣ ಪರ್ವ ಕಾಲವಾಗಿದೆ. ಈ ಮಥನದ ಸಮಯದಲ್ಲಿ ಸುಮಾರು 14 ವಿವಿಧ ರತ್ನಗಳು ಹೊರಹೊಮ್ಮಲಾಗಿ  ಅದರಲ್ಲಿ ಹಾಲಾಹಲವೆನ್ನುವ ಕಾರ್ಕೋಟಕ ವಿಷವೂ ಕೂಡಾ ಒಂದಾಗಿದ್ದು,  ಹಾಲಾ ಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ – ಕಲ್ಲೋಲ  ಉಂಟಾದ್ದರಿಂದ  ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನೇ  ಸೇವಿಸಿ ನೀಲಕಂಠ ನೆಂದು ಪ್ರಖ್ಶಾತಿ ಪಡೆಯುತ್ತಾನೆ.  ಭಕ್ತರಿಗೋಸ್ಕರ ಇಂತಹ ಅನೇಕ ಲೋಕ ರಕ್ಷಣೆಯ ಕಾರ್ಯದಲ್ಲಿ ತೊಡಗಿರುವ ಸೃಷ್ಟಿಕರ್ತ ಪರಶಿವನನ್ನು ಪವಿತ್ರ ಶ್ರಾವಣ ಪರ್ವ ಕಾಲದಲ್ಲಿ ಸರ್ವರೂ ಶ್ರೀ ಗುರು ಮುಖೇನ ಅನುಗ್ರಹ ಪಡೆದು ಧ್ಯಾನ, ಜಪ, ತಪದ ಮೂಲಕ ಭಕ್ತಿಯೊಂದಿಗೆ ಆರಾಧಿಸಿದರೆ ಸರ್ವ ಸಂಕಷ್ಟದಿಂದ ಪಾರಾಗಿ ಮುಕ್ತಿಯನ್ನು ಪಡೆಯಬಹುದಾಗಿದೆ..

ಸೃಷ್ಟಿ, ಸೌಂದರ್ಯದ ಮಡಿಲಲ್ಲಿ ಮಲಯಾಚಲ ತಪೋ ಭೂಮಿಯಲ್ಲಿ ಅಧ್ಮಾತ್ಮದ ಜ್ಞಾನ ಗಂಗೋತ್ರಿಯಾಗಿ ನೆಲೆಗೊಂಡಿರುವ ಬಾಳೆಹೊನ್ನೂರಿನ ಶ್ರೀಮದ್ರಂಭಾಪುರಿ  ಜಗದ್ಗುರು ವೀರಸಿಂಹಾಸನ ಮಹಾಪೀಠವು ಪ್ರವಾಸಿ ತಾಣವಾಗಿ ಭಕ್ತರನ್ನು ಆಕರ್ಷಿಸುತ್ತಿದೆ.

ಅಂತರಂಗ – ಬಹಿರಂಗದಲ್ಲಿನ ಅನಿಷ್ಟಗಳನ್ನು ತೊಡೆದು ಹಾಕಿ ಆತ್ಮಬಲ – ಮನೋಬಲಗಳನ್ನು ವೃದ್ಧಿಸಲು ವಿಶ್ವಶಾಂತಿ ಹಾಗೂ ಲೋಕ ಕಲ್ಶಾಣಾರ್ಥವಾಗಿ  ಬಾಳೆಹೊನ್ನೂರಿನ ಶ್ರೀಪೀಠದ ಪರಿಸರದಲ್ಲಿ  ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳವರು 29 ನೇ ವರ್ಷದ ಶಾವಣ ಮಾಸದ ಇಷ್ಟಲಿಂಗ ಮಹಾಪೂಜೆ ತಪೋನುಷ್ಠಾನವನ್ನು ಇದೇ ದಿನಾಂಕ  21 ರಿಂದ ಆರಂಭಿಸಿದ್ದು, ಬರುವ ಆಗಸ್ಟ್ 19 ರವರೆಗೆ  ಕೈಗೊಂಡಿದ್ದಾರೆ.

ಈ ಪವಿತ್ರ ಶ್ರಾವಣ ಪರ್ವಕಾಲದಲ್ಲಿ ಪ್ರತಿನಿತ್ಶ  ಶ್ರೀಜಗದ್ಗುರು ರೇಣುಕಾಚಾರ್ಯರಿಗೆ, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ, ಶಕ್ತಿಮಾತೆ ಶ್ರೀಚೌಡೇಶ್ವರಿ ದೇವಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ  ಮಹಾರುದ್ರಾಭಿಷೇಕ  ಅಷ್ಟೋತ್ತರ  ಮಹಾಮಂಗಲ ವಿಶೇಷ ಪೂಜೆ, `ಶ್ರೀ ಜಗದ್ಗುರು ರೇಣುಕ ವಿಜಯ’ ಪಾರಾಯಣ ಜರುಗಲಿದೆ.


ಶ್ರೀ ಮಲ್ಲಿಕಾರ್ಜುನಸ್ವಾಮಿ ಕಲ್ಮಠ
ಟಿಎಪಿಸಿಎಂಸ್ ಅಧ್ಶಕ್ಷರು, ಹರಪನಹಳ್ಳಿ.

Leave a Reply

Your email address will not be published.