ಮಂತ್ರಾನೇ ಮರೆತು ಹೋಗಿರ್ತಾವೆ!!!

ಮಂತ್ರಾನೇ ಮರೆತು ಹೋಗಿರ್ತಾವೆ!!!

ಏನು ಬ್ರೋ ತುಂಬಾ ದಿನ ಆಯ್ತು. ಪತ್ತೇನೆ ಇಲ್ಲ. ನಿನಗೆ ನೀನೆ ಲಾಕ್ ಡೌನ್ ಮಾಡ್ಕೊಂಡು ಬಿಟ್ಟಿದ್ದ್ಯಾ?

ಇಲ್ಲ ಬಾಸು. ಮತ್ತೆ ಕೆಲಸಗಳನ್ನು ಶುರು ಹಚ್ಕೋ ಬೇಕಲ್ಲಾ.
ಸೋ ಮೆನಿ ಥಿಂಗ್ಸ್ ಮರೆತೇ ಹೋಗಿದ್ವು. ಅವನ್ನೆಲ್ಲಾ ರಿಕಾಲ್ ಮಾಡ್ತಾ ಪ್ರಾಕ್ಟಿಸ್ ಮಾಡ್ತಾ ಇದ್ದೆ.

ಯಾ, ಯಾ. ಎಲ್ಲರಿಗೂ ಇದೇ ಎಕ್ಸಿಪಿರೀಯನ್ಸ್. ಇದೊಂಥರಾ ಫಾರ್ ಗೆಟ್ಟಿಂಗ್ ಥೀಯರಿ. ವಿಕ್ಕಿ ಅಂಕಲ್ ಹೇಳ್ತಾ ಇದ್ರು. ಸುಮ್ಮನೇ ಇಪ್ಪತ್ತು ದಿನ ನಮ್ಮ ರೂಢಿ ಕೆಲಸಗಳನ್ನು ಮಾಡದೇ ಹೋದ್ರೆ. ಅದನ್ನು ಮರೆತೇ ಬಿಡ್ತೀವಿ ಅಂತಾ.

ಹೌದು, ಆಲ್ ಮೋಸ್ಟ್ ಎರಡು ಮಂತ್ಸ್ ಆಯ್ತು. ನಾವೆಲ್ಲಾ ಮನೆಯಲ್ಲಿಯೇ ಲಾಕ್ ಆಗಿ. ಸೋ ಮೆನೀ ಆಕ್ಟಿವಿಟೀಸ್ ಫಾರ್ ಗಾಟನ್ ಯಾರ್. ಎಕ್ಸೆಪ್ಟ್ ತಿನ್ನೋದು ಮಲಗೋದು…

ಕೊಟ್ರೇಶ್ ಅಂಕಲ್ ಹೇಳ್ತಾ ಇದ್ರು. ಸ್ವಲ್ಪ ದಿನಗಳಲ್ಲಿ ಟೆಂಪಲ್ಸ್ ಓಪನ್ ಆಗ್ತಾವೆ. ಈ ಪೂಜಾರಿಗಳೆಲ್ಲಾ ಪೂಜೆ ಮಾಡೋದನ್ನಾ, ಮಂತ್ರ ಹೇಳೋದನ್ನ ಮರ್ತೇ ಬಿಟ್ಟಿರ್ತಾರೆ. ಇನ್ನು ಅಲ್ಲಿಗೆ ಹೋದರೇ ನಮ್ಮ ಪ್ರೇಯರ್ ಅನ್ನು ಗಾಡ್ ಗಳಿಗೆ ಅದು ಹೆಂಗೆ ತಲುಪಿಸ್ತಾರೆ ಅಂತಾ.

ಹೌದು! ಈ ಮಠಗಳ ಸ್ವಾಮೀಜಿಗಳೆಲ್ಲಾ ಭಕ್ತರನ್ನು ಮರ್ತಿರ್ತಾರೆ. ಇನ್ನು ಮೇಲೆ ಭಕ್ತರು ಹೋಗಿ ಕಾಲು ಮುಗಿದು ನಮಸ್ಕಾರ ಮಾಡಿದ್ರೇ, ಭಕ್ತರಿಗೆ ಯಾವ ರೀತಿ ಆಶೀರ್ವಾದ ಮಾಡೋದು ಅನ್ನೋದೇ ಮರ್ತಿರ್ತಾರೆ ಅಂತಾ ವೀರೂ ಅಂಕಲ್ ಹೇಳ್ತಿದ್ರು.


ಅಲ್ಲಾ ಬ್ರೋ ಇನ್ನು ಮೇಲೆ ಟೆಂಪಲ್ಸ್ ಎಲ್ಲಾ ಓಪನ್ ಆಗ್ತಾವಂತೆ. ಆದರೇ, ನೋ ಕುಂಕುಮ, ನೋ ಪ್ರಸಾದ, ನೋ ತೀರ್ಥ. ದೆನ್ ವಾಟ್ ಈಸ್ ದಿ ಫನ್ ಇನ್ ಗೋಯಿಂಗ್ ಟು ದೇವಸ್ಥಾನ?

ಗುರೂ, ದೇವಸ್ಥಾನಕ್ಕೆ ಹೋಗೋದೂ ಅಂದ್ರೇ ಫನ್ ಮಾಡೋದಕ್ಕೆ ಅಲ್ಲಾ. ಕುಂಕುಮ, ಪ್ರಸಾದ, ತೀರ್ಥ ಇಂಪಾರ್ಟೆಂಟ್ ಅಲ್ಲಾ. ನಾವು ದ್ಯಾನ ಮಾಡೋದು ಮುಖ್ಯ. ವಿ ಹ್ಯಾವ್ ಟು ಮೆಡಿಟೇಟ್.

ಅದನ್ನು ಮನೆಯಲ್ಲಿಯೇ ಮಾಡ್ಬಹುದಲ್ಲಾ. ಟೆಂಪಲ್‌ಗೇ ಯಾಕೆ ಹೋಗಬೇಕು?

ನೋಡು ಬ್ರದರ್, ದೇವಸ್ಥಾನದಲ್ಲಿ ಅಂದ್ರೇ ನಾವು ದೇವರಿಗೆ ಹತ್ತಿರ ಇರ್ತೀವಿ. ದೇವರ ಮೂರ್ತಿನಾ ನೋಡ್ತೀವಿ. ಗಾಡ್ ಕೂಡ ನಮ್ಮನ್ನು ನೋಡ್ತಾರೆ. ನಮ್ಮ ಪ್ರೇಯರ್ ಅಲ್ಲಿ ಮಾಡಿದ್ರೆ, ಬೇಗ ದೇವರಿಗೆ ರೀಚ್ ಆಗುತ್ತೆ.

ನೀ ಏನೇ ಅನ್ನು ಬ್ರದರ್. ಕುಂಕುಮ, ಪ್ರಸಾದ, ತೀರ್ಥ ಇಲ್ಲಾ ಅಂದ್ರೇ ಅದು ದೇವಸ್ಥಾನ ಅಂತಾ ಅನ್ನಿಸೋದೆ ಇಲ್ಲ. ವಿ ಡೋಂಟ್ ಫೀಲ್ ಇಟ್ ಈಸ್ ಎ ಟೆಂಪಲ್.

ಆಯ್ತಪ್ಪಾ, ನೀನು ಹೇಳಿದಾ ಹಾಗೇ ಅವುಗಳನ್ನೆಲ್ಲಾ ಕೊಡೋದಿಕ್ಕೆ ಪೂಜಾರಿಗಳು ಶುರು ಮಾಡಿದ್ರೂ ಅಂದ್ಕೋ. ಏನಾದ್ರೂ ಹೆಚ್ಚು ಕಮ್ಮಿ ಆದ್ರೇ? ಈ ದೇವರ ಮೇಲೆ, ಪೂಜಾರಿಗಳ ಮೇಲೆ ಜನ ನಂಬಿಕೇನೆ ಕಳ್ಕೊಂಡು ಬಿಡ್ತಾರೆ. ಆಮೇಲೆ ಯಾರೂ ಟೆಂಪಲ್ ಗೇ ಬರೋಲ್ಲಾ!

ಏನು ಹೆಚ್ಚೂ ಕಮ್ಮೀ ಆಗಬಹುದು?

ಪೂಜಾರಿ ಕೊಡೋ ಕುಂಕುಮ, ಪ್ರಸಾದ, ತೀರ್ಥದಲ್ಲೀ…

ತೀರ್ಥದಲ್ಲೀ?

ಕೊರೊನಾ ಇದ್ರೇ ! ಕೋವಿಂಡಾ..ಕೋವಿಡಾ!!!

 

 

ಆರ್.ಟಿ. ಅರುಣ್‌ಕುಮಾರ್
arunartist@gmail.com