ಫುಟ್‌ಪಾತ್ ಅಂಗಡಿಗಳಿಗೆ ಅನುಮತಿ

ಫುಟ್‌ಪಾತ್ ಅಂಗಡಿಗಳಿಗೆ ಅನುಮತಿ

ಹರಿಹರ, ಜೂ.1- ನಗರದಲ್ಲಿ ರೈಲ್ವೆ ನಿಲ್ದಾಣ ರಸ್ತೆ, ಗಾಂಧಿ ವೃತ್ತ, ಹರಪನಹಳ್ಳಿ ರಸ್ತೆ, ರಾಣಿ ಚೆನ್ನಮ್ಮ ವೃತ್ತ ಈ ರಸ್ತೆಗಳನ್ನು ಹೊರತು ಪಡಿಸಿ, ಶಿವಮೊಗ್ಗ ರಸ್ತೆಯಲ್ಲಿ ಫುಟ್‌ಪಾತ್‌ ಅಂಗಡಿಗಳಾದ ಎಗ್ ರೈಸ್, ತಿಂಡಿ ಅಂಗಡಿ, ಗೋಭಿ ಮಂಚೂರಿ, ಪಾನಿಪೂರಿ, ಹಣ್ಣು, ತರ ಕಾರಿ ವ್ಯಾಪಾರ ವಹಿವಾಟು ಮಾಡಿಕೊಂಡು ಹೋಗು ವಂತೆ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮಿಅವರು ಫುಟ್ ಪಾತ್ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.

ನಗರಸಭೆ ಆವರಣದಲ್ಲಿ ನಗರದ ಫುಟ್‌ಪಾತ್ ಅಂಗಡಿ ಮಾಲೀಕರ ಜೊತೆಯಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಯಾವುದೇ ಕೊರೊನಾ ರೋಗದ ಲಕ್ಷಣಗಳು ಕಂಡುಬರದೇ ಇರುವುದರಿಂದ ಅನೇಕ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆದು ಕೊಂಡು ವ್ಯಾಪಾರ, ವಹಿವಾಟು ಮಾಡುತ್ತಿದ್ದು, ಆದ ರಂತೆ ಫುಟ್‌ ಪಾತ್ ವ್ಯಾಪಾರಸ್ಥರು ಅದರಲ್ಲಿ ಎಗ್‌ರೈಸ್ ಮತ್ತು ಚಿಕನ್ ಅಂಗಡಿ ಹಾಗೂ ಗೋಭಿ ಮಂಚೂರಿ, ಪಾನಿಪೂರಿ, ರಾತ್ರಿ ತಿಂಡಿ ಅಂಗಡಿಗಳು ಸಂಜೆ 4 ರಿಂದ ರಾತ್ರಿ 7 ರವರೆಗೆ ತಮ್ಮ ವ್ಯಾಪಾರ ವಹಿವಾಟು ನಡೆಸ ಬೇಕು ಮತ್ತು ರೈಲ್ವೆ ನಿಲ್ದಾಣದ ರಸ್ತೆ, ಗಾಂಧಿವೃತ್ತ, ನಗರ ಸಭೆ ಮುಂಭಾಗ, ಹರಪನಹಳ್ಳಿ ರಸ್ತೆ, ಈ ರಸ್ತೆಯಲ್ಲಿ ಯಾವುದೇ ಅಂಗಡಿ ಗಳನ್ನು ತೆರೆಯುವುದಕ್ಕೆ ಅವಕಾಶ ಇರುವುದಿಲ್ಲ. ಒಂದು ವೇಳೆ ಈ ರಸ್ತೆಯಲ್ಲಿ ಯಾರಾದರೂ ವ್ಯಾಪಾರ, ವಹಿವಾಟು ನಡೆಸಲು ಮುಂದಾದರೆ ಅವರ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದು ಹೇಳಿದರು.

ಗಾಂಧಿ ಮೈದಾನದ ಮಳಿಗೆಯಲ್ಲಿ ಇರುವ ಮದ್ಯದ ಅಂಗಡಿಯನ್ನು ಮುಚ್ಚಿಸಲು ಅಬಕಾರಿ ಇಲಾಖೆಯ ಅಧಿ ಕಾರಿಗಳಿಗೆ ಪತ್ರವನ್ನು ಬರೆದಿರುವುದಾಗಿ ತಿಳಿಸಿದರು.

ರಮೇಶ್, ರಾಘು, ರಾಜು, ಮಂಜುನಾಥ್, ಉಮೇಶ್, ವಿಕಾಸ್, ಪ್ರಕಾಶ್, ಚಂದ್ರು, ಕೊಟ್ರೇಶ್, ಅಣ್ಣೋಜಿ ರಾವ್ ಹಾಗು ಇತರರು ಹಾಜರಿದ್ದರು.

Leave a Reply

Your email address will not be published.