ಮುಂಗಾರು ಹಂಗಾಮಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆ

ದಾವಣಗೆರೆ, ಮೇ 23- ಪ್ರತೀ ವರ್ಷದಂತೆ ಪ್ರಸಕ್ತ ಸಾಲಿನಲ್ಲಿಯೂ ಸಹ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆಯಿಂದ ರಿಯಾಯತಿ ದರದಲ್ಲಿ ಮೆಕ್ಕೆಜೋಳ, ರಾಗಿ, ಜೋಳ, ಭತ್ತ, ಶೇಂಗಾ, ತೊಗರಿ, ಅಲಸಂದೆ, ಸಜ್ಜೆ, ನೆಲಗಡಲೆ ವಿವಿಧ ಬೆಳೆಗಳ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಬಿ. ಮುದಗಲ್ ತಿಳಿಸಿದ್ದಾರೆ.

ಇಲಾಖೆಯಿಂದ ನೀಡಲಾದ ಮಾರ್ಗಸೂಚಿಯನ್ವಯ ಪ್ರತಿ ಒಬ್ಬ ರೈತರಿಗೆ ಗರಿಷ್ಠ 5 ಎಕರೆಗೆ ಅಥವಾ ಅವರ ವಾಸ್ತವಿಕ ಹಿಡುವಳಿ ಇದರಲ್ಲಿ ಯಾವುದು ಕಡಿಮೆಯೋ ಆ ವಿಸ್ತೀರ್ಣಕ್ಕೆ ಮಾತ್ರ ರಿಯಾಯತಿ ಬಿತ್ತನೆ ಬೀಜ
ವಿತರಣೆ ಮಾಡಲಾಗು ವುದು ಎಂದು ಹೇಳಿದ್ದಾರೆ.

ರೈತರಿಗೆ ರಿಯಾಯತಿ ಬಿತ್ತನೆ ಬೀಜ ವಿತರಿಸುವ ಸಂದರ್ಭದಲ್ಲಿ ಒಂದು ಬೆಳೆಯು ಬಿತ್ತನೆ ಬೀಜವನ್ನು ಗರಿಷ್ಠ 3 ಎಕರೆಗೆ ಅಥವಾ ವಾಸ್ತವಿಕ ಹಿಡುವಳಿಗೆ ಸೀಮಿತಗೊಳಿಸಿ ವಿತರಿ ಸಲಾಗುವುದು. ಇನ್ನು ಉಳಿದ ಪ್ರದೇ ಶಕ್ಕೆ ಬೇರೆ ಬೆಳೆಯ ಬಿತ್ತನೆ ಬೀಜ ವನ್ನು ವಿತರಿಸಲಾಗುವುದು. ಹವಾ ಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಠವಾಗುವ  ಸಾಧ್ಯತೆ ಹಿನ್ನೆಲೆಯಲ್ಲಿ ಏಕ ಬೆಳೆ ಪದ್ಧತಿಯನ್ನು ಬಿಟ್ಟು ಬಹು ಬೆಳೆ, ಅಂತರ ಬೆಳೆ ಹಾಗೂ ಮಿಶ್ರ ಬೆಳೆ ಪದ್ಧತಿಯನ್ನು ಅಳವಡಿಸಿ ಕೊಳ್ಳಲು ಇದು ಸಹಕಾರಿಯಾಗಲಿ ದೆ.  ಇದರಿಂದ ರೈತರು ಹೆಚ್ಚಿನ ಆದಾಯ ಪಡೆಯಲು ಹಾಗೂ ಸುಸ್ಥಿರ ಕೃಷಿಗೆ ಅನುಕೂಲವಾಗುವು ದು ಹಾಗೂ ರೈತರ ಆದಾಯ ದ್ವಿಗುಣಗೊಳಿಸುವ ಪ್ರಯತ್ನವಾಗಿದೆ.

ಬಿತ್ತನೆ ಬೀಜಗಳನ್ನು ಪಡೆಯಲು ರೈತರು ಕಡ್ಡಾಯವಾಗಿ FRUITS ತಂತ್ರಾಂಶದಲ್ಲಿ ನೋಂದಣಿ ಮಾಡಿಸಿಕೊಂಡಿರ ಬೇಕು.  ರೈತರ ಸ್ವಂತ ಹಿಡುವಳಿಗೆ ಬಿತ್ತನೆ ಬೀಜ ವಿತರಣೆ ಮಾಡಲಾಗು ವುದು. ಎಲ್ಲಾ ವರ್ಗದ ರೈತರಿಗೆ ಗರಿಷ್ಠ 5 ಎಕರೆಗೆ ಮಿತಿಗೊಳಿಸಿ ಸೌಲಭ್ಯ ನೀಡಲಾಗುವುದು.  

ಸ್ವಪರಾಗ ಸ್ಪರ್ಶ ಬೆಳೆಗಳಾದ ಶೇಂಗಾ, ತೊಗರಿ, ಹೆಸರು, ಉದ್ದು, ಅಲಸಂದೆ, ರಾಗಿ ಹಾಗೂ ಇತರೆ ಬೆಳೆಗಳಲ್ಲಿ ಒಮ್ಮೆ ಬಿತ್ತನೆ ಬೀಜಗಳನ್ನು ವಿತರಿಸಿದ ರೈತರಿಗೆ ಮುಂದಿನ ಮೂರು ವರ್ಷಗಳ ಬಳಿಕ ಅದೇ ತಳಿ/ಬೆಳೆ ಬೀಜಗಳನ್ನು ವಿತರಿಸಲಾಗುವುದು.  ಈ ಬೆಳೆಗಳಲ್ಲಿ ರೈತರು ಇಲಾಖೆಯಿಂದ ಪಡೆದು ಬೆಳೆದ ಬೆಳೆಯ ಬಿತ್ತನೆ ಬೀಜಗಳನ್ನು ಮರು ಬಳಕೆ ಮಾಡಿಕೊಳ್ಳಬಹುದಾಗಿದೆ.  ಒಂದು ವೇಳೆ ರೈತರು ಬೆಳೆ ಪರಿವರ್ತನೆ
ಮಾಡಲು ಇಚ್ಚಿಸಿದಲ್ಲಿ ಮಾತ್ರ ಬೇರೆ ಬೆಳೆ/ತಳಿಗಳ ಬಿತ್ತನೆ ಬೀಜಗಳನ್ನು ಮುಂದಿನ ವರ್ಷ ಗಳಲ್ಲಿ ವಿತರಿಸಲಾಗುವುದು ಎಂದು ಕೃಷಿ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.