ಅಭಿನಂದನೆಗಳು ! ಜಿಲ್ಲಾ ಅಧಿಕಾರಿಗಳೇ, ಆರೋಗ್ಯ ಇಲಾಖೆಯವರೇ : ನಿಮ್ಮಲ್ಲೊಂದು ಮನವಿ

ಅಭಿನಂದನೆಗಳು ! ಜಿಲ್ಲಾ ಅಧಿಕಾರಿಗಳೇ, ಆರೋಗ್ಯ ಇಲಾಖೆಯವರೇ : ನಿಮ್ಮಲ್ಲೊಂದು ಮನವಿ

ಅಭಿನಂದನೆಗಳು ! ಜಿಲ್ಲೆಯ ಅಧಿಕಾರಿಗಳೇ ಮತ್ತು ಆರೋಗ್ಯ ಇಲಾಖೆಯವರೇ. ನಿಮಗೆ ನಮ್ಮ ದಾವಣಗೆರೆಯ ಪ್ರತಿಯೊಬ್ಬ ಪ್ರಜೆಯೂ ಅಭಿನಂದಿಸುತ್ತೇವೆ. ವಂದಿಸುತ್ತೇವೆ.

ಕೋವಿಡ್ ನಿಯಂತ್ರಣದಲ್ಲಿ ಸೋಂಕಿತರ ಆರೋಗ್ಯ ಸುಧಾರಿಸುವಲ್ಲಿ, ಅವರು ಮತ್ತೆ ಮನೆಗೆ ಸುರಕ್ಷಿತವಾಗಿ ಮರುಳುವಲ್ಲಿ ನಿಮ್ಮ ಪಾತ್ರ ಪ್ರಮುಖವಾದದ್ದು. ಎಲ್ಲರೂ ನಿಮ್ಮನ್ನು ನಂಬಿದ್ದೇವೆ. ನಿಮ್ಮ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ದಕ್ಷತೆಯಿಂದ ನಿಭಾಯಿಸುತ್ತಿದ್ದೀರಿ ಎಂಬ ಅಚಲ ವಿಶ್ವಾಸವಿದೆ.

ನಮಸ್ಕಾರ ಆರೋಗ್ಯ ಇಲಾಖೆ. ನಮ್ಮ ವಿದ್ಯಾರ್ಥಿಗಳು ಕೋವಿಡ್ ಮ್ಯಾನೇಜ್‌ಮೆಂಟ್ ಅಧ್ಯಯನ ನಡೆಸುತ್ತಿದ್ದಾರೆ. ಅವರ ಸಮೀಕ್ಷೆಯ ಪ್ರಕಾರ ಕೆಲವು ಮುಖ್ಯ ಅಂಶಗಳನ್ನು ನಿಮ್ಮ ಗಮನಕ್ಕೆ ಮಾಧ್ಯಮಗಳ ಮೂಲಕ ವ್ಯಕ್ತಪಡಿಸುತ್ತಿದ್ದೇವೆ.

ಜಿಲ್ಲೆಯ ಎಲ್ಲಾ ಇಲಾಖೆಯವರ ದಕ್ಷತೆ ಮತ್ತು ಮಾಧ್ಯಮಗಳು ಮೂಡಿಸುತ್ತಿದ್ದ ಜಾಗೃತಿಯ ಫಲವಾಗಿ ದಾವಣಗೆರೆ ಹಸಿರು ವಲಯವಾಗಿತ್ತು. ಕೆಲವೇ ದಿನಗಳಲ್ಲಿ ಕೊರೊನಾ ಸೋಂಕು ಹರಡಲು ಆರಂಭಿಸಿತು. ಅದರ ಮುಖ್ಯ ವಾಹಕರು ಒಬ್ಬ ಆರೋಗ್ಯ ಸಿಬ್ಬಂದಿ! ಅವರ ಮುಗ್ದತೆಯೋ, ಅಜಾಗೂರಕತೆಯೋ, ಅವರು ಹಲವಾರು ಜನರಿಗೆ ಸೋಂಕು ಹರಡಲು ಕಾರಣಕರ್ತರಾದರು. ಅವರ ಸಂಬಂಧಿಗಳಿಗೆ, ಒಡನಾಟಕ್ಕೆ ಬಂದವರಿಗೆ ಹಾಗೂ ಅವರು ಶುಶ್ರೂಷೆ ಮಾಡಿದ ರೋಗಿಗಳಿಗೆ! ಈಗ ನಮ್ಮ ಮುಖ್ಯ ಉದ್ದೇಶ ಅವರನ್ನು ಗುರಿಯಿಟ್ಟು ದೂಷಿ ಸುವುದಲ್ಲ. ಒಬ್ಬ ಆರೋಗ್ಯ ಸಿಬ್ಬಂದಿ ಅಜಾಗೂ ರಕತೆ ವಹಿಸಿದರೆ, ಅರಾಜಕತೆ ಉಂಟಾಗ ಬಹುದು ಎನ್ನುವುದಕ್ಕೆ ಸಣ್ಣ ದೃಷ್ಟಾಂತವಿದು. ಈಗ ಮುಖ್ಯ ವಿಷಯಕ್ಕೆ ಬರೋಣ.

ನೀವು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ, ಈಗ ಕೋವಿಡ್ ಆರೋಗ್ಯ ಮೇಲುಸ್ತುವಾರಿ-ಜವಾಬ್ದಾರಿ ನಿರ್ವಹಿಸುತ್ತಿರುವುದು ಚಿಗಟೇರಿ ಆಸ್ಪತ್ರೆ. ಆ ಆಸ್ಪತ್ರೆಯ ಸಮುಚ್ಚಯವನ್ನು ಅಧ್ಯ ಯನ ಮಾಡಿರುವ ನಮ್ಮ ವಿದ್ಯಾರ್ಥಿಗಳು ಗಮನಕ್ಕೆ ತಂದಿರುವ ಪ್ರಮುಖ ಅಂಶಗಳು ಹೀಗಿವೆ.

ಜಿಲ್ಲಾ ಆಸ್ಪತ್ರೆಯು ವಿವಿಧ ವಿಭಾಗಗಳನ್ನು ಹೊಂದಿಕೊಂಡಿರುವ ಕಟ್ಟಡಗಳ ಸಮುಚ್ಚಯ. ಸೂಕ್ಷ್ಮವಾಗಿ ಅವಲೋಕಿಸಿದರೆ, ಇಲ್ಲಿಯ ಕೋವಿಡ್ ವಾರ್ಡ್‌ಗಳನ್ನು, ರೋಗಿಗಳ ಹಾಸಿಗೆಗ ಳನ್ನು, ಅಲ್ಲಿಯ ಶೌಚಾಲಯ, ಸ್ನಾನ ಗೃಹಗಳನ್ನು ಶುಚಿಯಾಗಿಸಲು ಶ್ರಮಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗಳಿಗೆ ಮೊದಲ ಶ್ರೇಯ ಸಲ್ಲಬೇಕು. ಹಾಗೆ ನೋಡಿದರೆ, ಅವರಿಗೆ ಹೆಚ್ಚಿನ ಸೌಲಭ್ಯವಿಲ್ಲ ರಕ್ಷಣೆಯಿಲ್ಲ. ಹೆಚ್ಚು ಕೋವಿಡ್ ಸಂಪರ್ಕಕ್ಕೆ ಬರುವ ಅವರಿಗೆ, ಅದನ್ನು ತಡೆಗಟ್ಟುವ ವೈದ್ಯ ಕೀಯ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ. ಅದರ ವ್ಯಾಸಂಗದ ಮಿತಿಯಿದೆ. ಆದರೂ ಅವರು ಯುದ್ಧದಲ್ಲಿ ಮುಂದಿನ ಸಾಲಿನಲ್ಲಿ ಇರುವ ಯೋಧರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ನಂತರದಲ್ಲಿ, ಸೋಂಕಿತರ ಗಂಟಲಿನ ಸ್ಯಾಂಪಲ್ ಕಲೆ ಹಾಕುವ ಮತ್ತು ಪರೀಕ್ಷೆ ಮಾಡುವ ಸಿಬ್ಬಂದಿಗಳು. ಅವರಂತೂ ಅತ್ಯಂತ ಅಪಾಯ ವನ್ನು ಎದುರಿಸಿ, ಕಾರ್ಯ ನಿರ್ವಹಿ ಸುತ್ತಿರುವ ಯೋಧರು. ಸೋಂಕಿತರ ಶುಶ್ರೂಷೆ ಮಾಡುವ ನರ್ಸಿಂಗ್ ಸಿಬ್ಬಂದಿಗಳು ಹೆಚ್ಚು ನೇರ ವಾಗಿ ಹಗಲಿರಳೂ ರೋಗಿಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಸಂಗ್ರಹಿಸಿದ ಮಾಹಿತಿ ಆಧರಿಸಿ, ಸೂಕ್ತ ಚಿಕಿತ್ಸಾ ನೀತಿಯನ್ನು ರೂಪಿಸುವ ವೈದ್ಯಕೀಯ ತಂಡ. ಅವರಿಗೆ ಸಹಾಯಕರಾಗಿ ಹೆಗಲು ಕೊಟ್ಟು ಶ್ರಮಿಸುತ್ತಿರುವ ಇಂಟರ್ನ್‌ಶಿಪ್ ವಿದ್ಯಾರ್ಥಿಗಳು. ಇವರೆಲ್ಲರಿಗೂ ಅಭಿನಂದನೆಗಳು! ಹೃದಯಪೂರ್ವಕ ವಂದನೆಗಳು. `ವೈದ್ಯ ನಾರಾಯಣೋ ನಮಃ’.  

ಇವರೆಲ್ಲರ ಶ್ರಮಕ್ಕೆ ಪೂರಕವಾಗಿ ಶ್ರಮಿಸುತ್ತಿರುವ ವಿಭಾಗವೊಂದಿದೆ. ಅದುವೇ ಔಷಧಿ ಕೇಂದ್ರ. ಅವರ ಪ್ರಾಮಾಣಿಕ ಪ್ರಯತ್ನದಿಂದಾಗಿ ಸೂಕ್ತ ಔಷಧಿಗಳು ಮತ್ತು ಸ್ವಯಂ ರಕ್ಷಾ ಕವಚ, ಮಾಸ್ಕ್ ಗಳ ಸರಬರಾಜು ಆಗುತ್ತಿದೆ. ಅವರನ್ನು ಆಂಬುಲೆನ್ಸ್ ಚಾಲಕ ಮುಂತಾದ ಸೇವಾ ಸಿಬ್ಬಂದಿಗಳನ್ನು ಮರೆಯುವ ಹಾಗೆಯೇ ಇಲ್ಲ.

ಹೀಗೆ ಎಷ್ಟೊಂದು ಕೊರೊನಾ ವಾರಿಯ ರ್ಸ್‌ಗಳು ಕೋವಿಡ್ ವಿರುದ್ಧದ ಯುದ್ಧದಲ್ಲಿ ಜನರ, ಸಮಾಜದ ಹಿತಕ್ಕಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಇವರೆಲ್ಲರ ಮೇಲ್ವಿಚಾರಣೆ ಮಾಡುತ್ತಿರುವ, ಜಿಲ್ಲೆಯ ಅಧಿಕಾರಿಗಳೇ ಮತ್ತು ಆರೋಗ್ಯ ಇಲಾಖೆಯವರೇ ನಿಮಗೆ ಅಭಿನಂದನೆಗಳು ! ಈ ಯುದ್ಧದಲ್ಲಿ ನೀವು ಸೇನಾಧಿಪತಿಗಳು, ಯುದ್ಧ ಮಂತ್ರಿಗಳು. ನಿಮ್ಮ ಫೋಟೋಗಳು ಅಭಿನಂದನಾ ಸುದ್ಧಿಗಳೊಂದಿಗೆ ಮಾಧ್ಯಮಗಳಲ್ಲಿ ಪ್ರಕಟವಾಗಿರು ವುದು ಹೆಮ್ಮೆಯ ವಿಷಯ. ನಿಮಗೆ ವಂದನೆಗಳು.

ನಮ್ಮ ಕೋವಿಡ್ ಅಧ್ಯಯನ ತಂಡ ಹಲವು ದೇಶಗಳಲ್ಲಿ ಕೆಲಸ ಮಾಡುತ್ತಿರುವ ತಜ್ಞ ವೈದ್ಯರು, ಮನೋಶಾಸ್ತ್ರಜ್ಞರು, ಆರೋಗ್ಯ ಸಂಸ್ಥೆಗಳು ಮತ್ತು ಮಾಧ್ಯಮದವರೊಂದಿಗೆ ವಿಷಯಗಳನ್ನು ಹಂಚಿಕೊಳ್ಳುತ್ತಿದೆ, ಚರ್ಚಿಸುತ್ತಿದೆ. ಅವರೆಲ್ಲಾ ಒಂದು ಮುಖ್ಯ ವಿಷಯ ಪ್ರಸ್ತಾಪಿಸಿದರು. ಕಣ್ಣಿಗೆ ಕಾಣದ ಕೊರೊನಾ ಯೋಧರನ್ನು ಮೊದಲು ನಾವು ಬೆಳಕಿಗೆ ತರಬೇಕು. ಇಡೀ ಸಮಾಜ ಅವರನ್ನು ಗುರ್ತಿಸಿ, ಪ್ರೋತ್ಸಾಹಿಸಿ ಉತ್ತೇಜಿಸಬೇಕು. ಆಗ ಅವರು ಹೆಚ್ಚು ಉತ್ಸಾಹದಿಂದ ತಮ್ಮನ್ನು ಈ ತುರ್ತು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಈ ನಿಟ್ಟಿನಲ್ಲಿ ಅವರನ್ನೆಲ್ಲಾ ಪರಿಚಯಿಸಬೇಕೆಂದು ನಮ್ಮ ಕೊರೊನಾ ಅಧ್ಯಯನ ತಂಡ ಪ್ರಯತ್ನಿಸುತ್ತಿದೆ. ನಮ್ಮ ವಿದ್ಯಾರ್ಥಿಗಳು ಮೇಲ್ಕಾಣಿಸಿದ ಎಲ್ಲಾ ವಿಭಾಗಗಳ ಮೇಲ್ವಿಚಾರಕರ, ಸಿಬ್ಬಂದಿಗಳ ಹೆಸರು, ಪರಿಚಯ, ಫೋಟೋಗಳು ಇತ್ಯಾದಿ ಗಳನ್ನು ಪಡೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಕಾರಣ ತುಂಬಾ ಸಿಂಪಲ್. ಮೇಲ್ವಿಚಾರಕರ ಅಪ್ಪಣೆಯಿಲ್ಲದೆ ನಾವೇನೂ ಮಾಡುವಂತಿಲ್ಲ. ಯಾವುದೇ ಮಾಹಿತಿ, ಫೋಟೋಗಳನ್ನು ನೀಡಲು ಸಾಧ್ಯವಿಲ್ಲ. ಈಗ ನಿಮ್ಮಲ್ಲೊಂದು ಮನವಿ. ಅಧಿಕಾರಿಗಳಾದ ನೀವುಗಳೇ ಅವರ ಹೆಸರು, ಮಾಹಿತಿಗಳು, ಗ್ರೂಪ್ ಫೋಟೋಗಳನ್ನು ಮಾಧ್ಯಮದ ಮೂಲಕ ಬಿಡುಗಡೆ ಮಾಡಿ. ಸಮಾಜಕ್ಕೆ ಅವರನ್ನು ಪರಿಚಯಿಸಿ. ಖಂಡಿತಾ ನೀವಿದನ್ನು ಮಾಡುತ್ತೀರಿ. ಅವರನ್ನೂ  ಉತ್ತೇಜಿಸಿ ಮಾನವೀಯತೆಯನ್ನು ಮರೆಯುತ್ತೀರಿ ಎಂಬ ವಿಶ್ವಾಸವಿದೆ.


– ಇಂತಿ ಕೋವಿಡ್ ಅಧ್ಯಯನ ತಂಡ