ಕೊರೊನಾ ವಾರಿಯರ್ಸ್ ಸೇವೆ ಶ್ಲ್ಯಾಘನೀಯ

ಕೊರೊನಾ ವಾರಿಯರ್ಸ್ ಸೇವೆ ಶ್ಲ್ಯಾಘನೀಯ

ಜಗಳೂರು, ಮೇ 22- ಕೊರೊನಾ ವೈರಸ್ ತಡೆಯಲು ಕಳೆದ ಎರಡು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿರುವ ವಾರಿಯರ್ ಸೇವೆ ಶ್ಲ್ಯಾಘನೀಯವಾಗಿದೆ ಎಂದು ಮಾಜಿ ಶಾಸಕ ಹೆಚ್.ಪಿ.ರಾಜೇಶ್ ಹೇಳಿದರು.

ತಾಲ್ಲೂಕಿನ ಗುರುಸಿದ್ದಾಪುರ ಗ್ರಾಮದ ಮಡ್ರಳ್ಳಿ ಚೌಡಮ್ಮ ಸಮುದಾಯ ಭವನದ ಆವರಣ ದಲ್ಲಿ ಬಸವನಕೋಟೆ, ಗುರುಸಿದ್ದಾ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು ಹಾಗು ಗ್ರಾಮ ಪಂಚಾಯತಿ ಸಿಬ್ಬಂದಿಗಳಿಗೆ ಉಚಿತ ಆಹಾರದ ಕಿಟ್ ವಿತರಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗ ದಲ್ಲಿ ನಿಮ್ಮ ಸೇವೆ ಅನನ್ಯವಾಗಿದೆ. ತಾಲ್ಲೂಕಿನಾದ್ಯಂತ ಇದುವರೆಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗು ದಾನಿಗಳ ಸಹಕಾರದಿಂದ ಒಂದು ಸಾವಿರ ಕಿಟ್ ವಿತರಿಸಿದ್ದು, ಇನ್ನು ಹಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿತರಿಸಲಾಗುವುದು ಎಂದರು.

ಕಾಂಗ್ರೆಸ್ ಮುಖಂಡ ಶಂಕರಪ್ಪ ಮಾತನಾಡಿ, ದೇಶಕ್ಕೆ ಸಂಕಷ್ಟ ಎದುರಾಗಿದೆ. ಜನರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ನಿಮ್ಮ ಸೇವೆಗೆ ಪಕ್ಷ ಸಿದ್ದವಿದೆ ಎಂದರು.

ಮಾಜಿ ಶಾಸಕರು ಅಧಿಕಾರ ಇಲ್ಲದಿದ್ದರೂ ಸಂಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದಾರೆ. ಕ್ಷೇತ್ರದಲ್ಲಿ ಸುತ್ತಾಡಿ ಜನರ ನೋವುಗಳಿಗೆ ಸ್ಪಂದಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯೆ ಮಮತಾ ಮಲ್ಲೇಶ್, ಗ್ರಾ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ, ಬಸವ ನಕೋಟೆ ಗ್ರಾ.ಪಂ. ಅಧ್ಯಕ್ಷೆ ಪಂಕಜಾ ಶಂಕ್ರಪ್ಪ, ಉಪಾಧ್ಯಕ್ಷ ಕೊಟ್ರೇಶ್, ಮುಖಂಡರಾದ ಬಸವಾಪುರ ರವಿಚಂದ್ರ, ಬಿ.ಲೋಕೇಶ್, ಗೋಡೆ ಪ್ರಕಾಶ್, ವೆಂಕಟೇಶ್, ಮಲ್ಲೇಶ್, ಕಾಡಪ್ಪ, ಹನುಮಂತಪ್ಪ ಇಬ್ರಾಹಿಂ ಮತ್ತು ಇತರರು ಇದ್ದರು.