ಬಿಡುಗಡೆ! ರಿಲೀಸ್ !! ರಿಲೀಫ್ !!!

ಬಿಡುಗಡೆ!  ರಿಲೀಸ್ !!  ರಿಲೀಫ್ !!!

ಹಾಯ್! ಡಾ… ಹೌಡು ಯೂಡು?

ಹಲೋ ಡ್ಯೂಡ್ ಚೆನ್ನಾಗಿದ್ದೇನೆ. ನೀನು ಹೇಗಿದ್ದೀಯಾ?

ಈರ: ಹಿಂಗೇ ಗುರು. ಚೆನ್ನಾಗಿದ್ದೇನೆ. ಅಂದಂಗೆ ತುಂಬಾ ಡೇಸ್ ಆಯ್ತು ನಾವಿಬ್ಬರೂ ಮೀಟ್ ಆಗದೆ.

ಯಾ! ಏನ್ ಮಾಡ್ತಿಯಾ ಟೂ ಮಂತ್ಸ್ ಆಯ್ತು ಹೋಂ ಕ್ವಾರಂಟೈನ್ ನಲ್ಲಿದ್ದು. ಇವಾಗ ಮಾರ್ನಿಂಗ್ ಹೊತ್ತು ಸ್ವಲ್ಪ ಹೊರಗಡೆ ಬರಬಹುದು. ಅದಕ್ಕೇ ಇಲ್ಲಿ ಮೀಟ್ ಮಾಡೋಣ ಅಂತಾ ನಿನಗೆ ಕಾಲ್ ಮಾಡಿದ್ದು.

ಹೌದೂ ಈ ಪ್ಲೇಸ್ ಅಲ್ಲಿ ಕೆಲವು ಓಲ್ಡ್ ಪೀಪಲ್ ಮೀಟಾಗಿ ಚಾಟ್ ಮಾಡ್ತಿರ್ತಾರೆ ಅಲ್ವಾ?

ಯಾ! ಡರ್ಟಿ ಓಲ್ಡ್ ಚಾಪ್ಸ್. ಅದೂ ದೇಶಿ ಸ್ಟೈಲಿನಲ್ಲಿ ಹರಟೆ ಹೊಡಿತಾರೆ. ಮಾಡರ್ನ್‌ ಥಿಂಕಿಂಗೇ ಇಲ್ಲಾ ಅವರಿಗೆ. ಔಟ್ ಡೇಟೆಡ್ ಫೂಲ್ಸ್.

ಹೋಗ್ಲಿ ಬಿಡು ಅವರ ವಿಷಯ ನಮಗ್ಯಾಕೆ. ಬೈ ದಿ ವೇ ನಿನ್ನೆ ಮೂವರು ರಿಲೀಸ್ ಆದ್ರಂತೆ?

ಯಾವ ಜೈಲಿನಿಂದ?

ಹೇ ಪ್ರಿಸನರ್ಸ್ ಅಲ್ವೋ! ಕೋವಿಡ್ ಪೇಷೆಂಟ್ಸ್ ಹಾಸ್ಪಿಟಲ್ ನಿಂದ.

ಹಾಂ! ಆಗನ್ನು ಮತ್ತೆ. ಅಫ್ ಕೋರ್ಸ್ ಕೋವಿಡ್ ಹಾಸ್ಪಿಟಲ್ ಕೂಡ ಒಂದು ರೀತಿ ಪ್ರಿಸನ್ ಇದ್ದಾಂಗೆ. ಈಗ ಮೂವರು ರಿಲೀಸ್ ಆಗಿದ್ದಾರೆ. ಇನ್ನು ಏಳು ಜನಕ್ಕೆ ಬೇಲ್ ಸಿಕ್ಕಿದೆ.

ವಾಟೆವರ್ ಇಟ್ ಮೇ ಬಿ. ರಿಲೀಸ್ ಆದೋರು ನಿಜಕ್ಕೂ ಗ್ರೇಟ್!

ಹೌದು. ಅವರಿಗೆ ಒಳ್ಳೆಯ ಇಮ್ಯುನಿಟಿ ಸ್ಟ್ರೆಂತ್ ಇದೆ. ಯೂ ನೋ ಓನ್ ಥಿಂಗ್. ತುಂಬಾ ಜನ ಕೋವಿಡ್ ಬಂದ್ರೆ ಸಾಯೋಲ್ಲ. ದೇ ಕ್ಯಾನ್ ಫೈಟ್. ಈ ಓಲ್ಡ್‌ ಏಜ್ ಪೀಪಲ್, ಅಸ್ತಮಾ, ಡಯಾಬಿಟಿಕ್ ಇದ್ದೋರ್ದು ಸರ್ವೈವ್ ಆಗೋದು ಡಿಫಿಕಲ್ಟ್. ನಮ್ಮಲ್ಲಿ ಈ ಕೋವಿಡ್ ಗಿಂತಾ ಆಕ್ಸಿಡೆಂಟಿನಲ್ಲಿ ಡೆತ್ ಆಗೋದು ಜಾಸ್ತಿ.

ಯೂ ಆರ್ ರೈಟ್. ಹೋಗ್ಲಿ ಬಿಡು ಬೇರೆ ವಿಷಯ ಮಾತಾಡೋಣ. ಸ್ಮೋಕ್ ಮಾಡ್ತಿಯಾ? ಸಿಗರೇಟ್ ಬೇಕಾ?

ನೋ ನೋ. ಈ ಮಾಸ್ಕ್ ಹಾಕ್ಕೊಂಡು ಸ್ಮೋಕಿಂಗ್. ನೋ ವೇ. ಇದು ವೆರಿ ಇಂಜೂರಿಯಸ್ ಟು ಹೆಲ್ತ್. ಸದ್ಯಕ್ಕೆ ಡ್ರಿಂಕ್ಸೂ ಮುಟ್ತಿಲ್ಲಾ.

ಸರಿ ಬಿಡು. ಫೋರ್ಸ್ ಮಾಡೋಲ್ಲಾ. ಈ ಮಾಸ್ಕ್ ಹಾಕ್ಕೊಳ್ಳದೇ ಒಂದು ಫಜೀತಿ. ಡಿಸ್ ಗಸ್ಟಿಂಗ್.

ಏನು ಮಾಡ್ತಿ. ಹಾಕಲಿಲ್ಲಾ ಅಂದ್ರೆ ಪೊಲೀಸ್ ಹಿಡಿತಾರೆ. ಫೈನ್ ಹಾಕ್ತಾರೆ. ಮೊದಲು ಹೆಲ್ಮೆಟ್ ಇಲ್ಲಾ ಅಂದ್ರೆ ಫೈನ್ ಹಾಕ್ತಿದ್ರೂ ಈಗ ಇದಕ್ಕೂ ಹಾಕ್ತಾರೆ.

ನಮ್ಮ ಡ್ಯಾಡ್ ನನಗೆ ಹೆಣ್ಣು ನೋಡೋಕೆ ಹೋಗೋಣ ಅಂತಿದಾರೆ. ಯು ಸೀ. ಮಾಸ್ಕ್ ಹಾಕ್ಕೊಂಡು. ಸದ್ಯಕ್ಕೆ ಬೇಡ ಅಂದೆ.

ಹೇ ಕಲಾ ಮಂಜು ಅಂಕಲ್ ಹೇಳ್ತಿದ್ರೂ. ಈಗಿನ ಹುಡುಗರಿಗೆ ಇದೇ ಒಂದು ಚಾನ್ಸು ಅಂತಾ. ಮಾಸ್ಕ್ ಹಾಕಿದ್ದರೆ ನಮ್ಮ ಮುರಿದ ಹಲ್ಲು ಕಾಣೋಲ್ಲ. ನಾವು ಗುಟ್ಕಾ ಹಾಕಿ ಯೆಲ್ಲೋ ಆಗಿರೋ ಟೀತ್ ಸೀನೆ ಆಗೋಲ್ಲ.

ಅದು ಓ.ಕೆ. ಆದರೆ ಹುಡುಗಿ ಟೀತ್ ಹುಬ್ಬಲ್ಲಾಗಿದ್ದರೇ.

ನಡೆಯುತ್ತೇ ಇದೊಂತರಾ ಮದುವೆ ಮಾಡೋದು.

ಯಾವ ತರಹ?

ಮಾಸ್ಕ್ ಮ್ಯಾರೇಜ್‌ !!!

ಆರ್.ಟಿ. ಅರುಣ್‌ಕುಮಾರ್
arunartist@gmail.com