ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದಿಂದ ಆಹಾರದ ಕಿಟ್

ಬಿತ್ತನೆ ಬೀಜ, ಗೊಬ್ಬರ, ಕೀಟನಾಶಕ ಮಾರಾಟಗಾರರ ಸಂಘದಿಂದ ಆಹಾರದ ಕಿಟ್

ದಾವಣಗೆರೆ, ಮೇ 18- ಜಿಲ್ಲೆಯ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟ ನಾಶಕ ಮಾರಾಟಗಾರರ  ಸಂಘದಿಂದ ಆವರಗೆರೆ  ಮತ್ತು ನೀಲಮ್ಮನ ತೋಟದಲ್ಲಿ ರುವ ಜನರಿಗೆ ದವಸ, ಧಾನ್ಯಗಳ ಮುನ್ನೂರು ಕಿಟ್‌ಗಳನ್ನು ಆವರಗೆರೆ ಯಲ್ಲಿರುವ ಆರ್.ಜಿ.ಎಸ್ ಗೋದಾಮಿನ ಆವರಣ ದಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್ ವಿತರಿಸಿ ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ, ಸಂಘದ ಅಧ್ಯಕ್ಷರೂ ಹಾಗೂ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ, ಕಾರ್ಯಾಧ್ಯಕ್ಷ ಶ್ರೀನಿವಾಸ ಮೂರ್ತಿ, ಕಾರ್ಯದರ್ಶಿ ಟಿ.ಎಂ. ಉಮಾ ಪತಯ್ಯ ಹಾಗೂ ಎಲ್ಲ ಪದಾಧಿ ಕಾರಿಗಳು, ಮಹಾನಗರ ಪಾಲಿಕೆ ಸದಸ್ಯೆ ಶ್ರೀಮತಿ ಜಯಮ್ಮ ಗೋಪಿನಾಯಕ್ ಉಪಸ್ಥಿತರಿದ್ದರು.