ಸ್ಯಾನಿಟೈಸರ್ ಸ್ಟ್ಯಾಂಡ್‌ಗಳನ್ನು ಕೊಡುಗೆಯಾಗಿ ನೀಡಿದ ಶಿವನಳ್ಳಿ

ಸ್ಯಾನಿಟೈಸರ್ ಸ್ಟ್ಯಾಂಡ್‌ಗಳನ್ನು  ಕೊಡುಗೆಯಾಗಿ ನೀಡಿದ ಶಿವನಳ್ಳಿ

ದಾವಣಗೆರೆ, ಮೇ 18- ನಗರದ ಗೌರಿಶ್ರೀ ಎಂಟರ್ ಪ್ರೈಸಸ್ ಮಾಲೀಕರೂ ಆಗಿರುವ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಶಿವನಹಳ್ಳಿ ರಮೇಶ್ ಅವರು ಸ್ಯಾನಿಟೈಸರ್ ವಾಶ್ ಸ್ಟ್ಯಾಂಡ್ ತಯಾರಿಸಿದ್ದು, ಕೊರೊನಾ ವೈರಸ್ ತಡೆಗೆ ಶ್ರಮಿಸುತ್ತಿರುವವರಿಗೆ ಕೊಡುಗೆಯಾಗಿ ನೀಡಿದ್ದಾರೆ.

ಕೊರೊನಾ ವೈರಸ್ ಹರಡುವಿಕೆಯಿಂದ ಪ್ರತಿಯೊಬ್ಬರು ಸಂರಕ್ಷಿಸಿಕೊಳ್ಳುವ ಸಲುವಾಗಿ ಸ್ವಚ್ಛತೆ ಕಾಪಾಡಬೇಕಾಗಿದೆ. ಈ ಕ್ರಮದಿಂದ ಅನ್ಯರಿಗೂ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಆಶೀರ್ವಾದ ಡಿಸ್ಟ್ರಿಬ್ಯೂಟರ್ ಸಹಯೋಗದಲ್ಲಿ ಉತ್ತಮ ಗುಣಮಟ್ಟದ ಪೈಪುಗಳಿಂದ ತಯಾರಿಸಿದ ಸ್ಯಾನಿಟೈಸರ್ ವಾಶ್ ಸ್ಟ್ಯಾಂಡ್‌ಗಳನ್ನು ರಮೇಶ್ ಕೊಡುಗೆಯಾಗಿ ನೀಡಿದ್ದಾರೆ.

ನಗರದ ಜಿಲ್ಲಾ ಚಿಗಟೇರಿ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ, ಹಳೇ ಭಾಗದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಮಹಿಳಾ ಪೊಲೀಸ್ ಠಾಣೆಗಳಿಗೆ, ವೈದ್ಯರು, ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಕೊರೊನಾ ವಾರಿಯರ್ಸ್ ಕೈಗಳನ್ನು ಸ್ಯಾನಿಟೈಸರ್‌ನಲ್ಲಿ ತೊಳೆದುಕೊಂಡು ಹೋಗಲು ಪೂರಕವಾಗಿ ಆಸ್ಪತ್ರೆ ಮುಂಭಾಗದಲ್ಲಿ ಅಳವಡಿಸಿರುವುದಾಗಿ ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ. ನಾಗರಾಜ್, ಮುರುಗೇಶ್ ಇತರರು ಇದ್ದರು.