ಮುದ್ರಣ ಕೆಲಸಗಾರರ ನೆರವಿಗೆ ಮನವಿ

ಮುದ್ರಣ ಕೆಲಸಗಾರರ ನೆರವಿಗೆ ಮನವಿ

ದಾವಣಗೆರೆ, ಮೇ 18- ಕಳೆದ ಎರಡು ತಿಂಗಳುಗಳಿಂದ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಪ್ರಿಂಟಿಂಗ್ ಪ್ರೆಸ್‌ಗಳೂ ಕೂಡ ಸ್ತಬ್ಧಗೊಂಡಿದ್ದು, ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಮುಂದೆ ಬರಬೇಕೆಂದು ಮುದ್ರಣ ಕೆಲಸಗಾರರ ಕ್ಷೇಮಾಭಿವೃದ್ಧಿ ಸಂಘವು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ಮುದ್ರಣ ಕೆಲಸಗಾರರನ್ನು ಅಸಂಘಟಿತ ವಲಯಕ್ಕೆ ಸೇರಿಸಿದ್ದು ಬಿಟ್ಟರೆ, ಸರ್ಕಾರದಿಂದ ಬೇರೆ ಯಾವುದೇ ರೀತಿಯ ಸಹಾಯವನ್ನು ಪಡೆದಿರುವುದಿಲ್ಲ.ಇಂತಹ ಸಮಯದಲ್ಲಾದರೂ ನಮ್ಮ ಕಷ್ಟಗಳನ್ನು ಪರಿಗಣಿಸಿ ಪರಿಹಾರ ನೀಡಬೇಕೆಂದು ಸಂಘದ ಅಧ್ಯಕ್ಷ ಟಿ. ಶ್ರೀನಿವಾಸ್, ಉಪಾಧ್ಯಕ್ಷ ಸಿ.ಎಸ್. ರಾಘವೇಂದ್ರರಾವ್, ಕಾರ್ಯದರ್ಶಿಗಳಾದ ಮೃತ್ಯುಂಜಯ, ಕೆ.ಆರ್. ಮಲ್ಲಿಕಾರ್ಜುನ, ಸಹಕಾರ್ಯದರ್ಶಿ ಅರುಣ್ ಕುಮಾರ್, ಸಂಘಟನಾ ಕಾರ್ಯದರ್ಶಿ ಜಿ.ಎನ್. ವಸಂತಕುಮಾರ್ ಹಾಗೂ ಚಂದ್ರಶೇಖರ್ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published.