ಕೊರೊನಾದಿಂದ ಜಟಿಲ ಸಮಸ್ಯೆಯಲ್ಲಿ ಜಗತ್ತು

ಕೊರೊನಾದಿಂದ ಜಟಿಲ ಸಮಸ್ಯೆಯಲ್ಲಿ ಜಗತ್ತು

ಮಲೇಬೆನ್ನೂರಿನ ಕಾರ್ಯಕ್ರಮದಲ್ಲಿ ಶ್ರೀ ವಚನಾನಂದ ಸ್ವಾಮೀಜಿ ಕಳವಳ

ಮಲೇಬೆನ್ನೂರು, ಮೇ 15- ಪಟ್ಟಣದಲ್ಲಿ ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ಕೊರೊನಾ ವಾರಿಯರ್ಸ್‌ಗಳಿಗೆ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಅವರು ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಗುರುವಾರ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಪಂಚಮಸಾಲಿ ಗುರುಪೀಠದ ಶ್ರೀ ವಚನಾನಂದ ಸ್ವಾಮೀಜಿ ನಡೆಸಿಕೊಟ್ಟರು.

ಪೌರ ಕಾರ್ಮಿಕರನ್ನು ಸನ್ಮಾನಿಸಿ, ಆಶೀರ್ವ ಚನ ನೀಡಿದ ಶ್ರೀಗಳು, ಮಾರಕ ಕೊರೊನಾ ದಿಂದಾಗಿ ಜಗತ್ತು ಜಟಿಲ ಸಮಸ್ಯೆಯಲ್ಲಿ ಸಿಲು ಕಿದ್ದು, ಅದರಿಂದ ಹೊರಬರಲು ಎಲ್ಲರೂ ನಿತ್ಯ ಹೋರಾಟ ಮಾಡುತ್ತಿದ್ದಾರೆ. ಕೊರೊನಾ ನಿಯಂ ತ್ರಣಕ್ಕಾಗಿ ವೈದ್ಯರು, ದಾದಿಯರು, ಪೊಲೀಸರು, ಆಶಾ ಕಾರ್ಯಕರ್ತೆಯರು, ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಪೌರ ಕಾರ್ಮಿಕರು ನಗರ, ಪಟ್ಟಣದಲ್ಲಿ ಸ್ವಚ್ಛತೆ ಕೈಗೊಳ್ಳುವ ಮೂಲಕ ಯಾವುದೇ ಕಾಯಿಲೆಗಳು ಬರದಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಎಪಿಎಂಸಿ ಸದಸ್ಯ ಜಿ.ಮಂಜುನಾಥ್‌ ಪಟೇಲ್, ಪುರಸಭೆ ಸದಸ್ಯರಾದ ಮಹಾಲಿಂಗಪ್ಪ, ಬಿ.ಸುರೇಶ್, ಎ.ಅರೀಫ್‌ಅಲಿ, ಮಾಸಣಗಿ ಶೇಖರಪ್ಪ, ಸುಬ್ಬಿ ರಾಜಪ್ಪ, ದಾದಾವಲಿ, ಯೂಸೂಫ್, ಕೆ.ಜಿ.ಲೋಕೇಶ್, ಫಕೃದ್ದೀನ್, ಭೋವಿಕುಮಾರ್, ಎಂ.ಬಿ.ಫೈಜು, ಕುಂಬಳೂರು ವಾಸು, ಗುತ್ತೂರು ಕರಿಬಸಪ್ಪ, ಡಾಬಾ ಕಲ್ಲೇಶ್, ಪುರಸಭೆ ಅಧಿಕಾರಿಗಳಾದ ಸುರೇಶ್, ದಿನಕರ್, ಗುರುಪ್ರಸಾದ್, ನವೀನ್, ಪ್ರಭು, ಇಮ್ರಾನ್ ಮತ್ತಿತರರು ಈ ವೇಳೆ ಹಾಜರಿದ್ದರು.

Leave a Reply

Your email address will not be published.