ಮಲೇಬೆನ್ನೂರು : 60 ಕೆ.ಜಿ ಗುಟ್ಕಾ, ತಂಬಾಕು ವಶ

ಮಲೇಬೆನ್ನೂರು : 60 ಕೆ.ಜಿ ಗುಟ್ಕಾ, ತಂಬಾಕು ವಶ

ಮಲೇಬೆನ್ನೂರು, ಮೇ 8- ಪಟ್ಟಣದ ವಿವಿಧ ಅಂಗಡಿಗಳ ಮೇಲೆ ಶುಕ್ರವಾರ ದಾಳಿ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಅವರು  ಸುಮಾರು 60 ಕೆ.ಜಿ. ಗುಟ್ಕಾ, ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಗುಟ್ಕಾ, ತಂಬಾಕು ಉತ್ಪನ್ನಗಳ  ಮಾರಾಟವನ್ನು ನಿಷೇಧ ಮಾಡಿದ್ದರೂ, ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಕಳೆದ 2 ದಿನಗಳ ಹಿಂದೆಯೂ ದಾಳಿ ಮಾಡಿ, ಗುಟ್ಕಾ, ತಂಬಾಕು ವಶಕ್ಕೆ ಪಡೆದ್ದಿದ್ದರು.
ಔಷಧ ಸಿಂಪಡಣೆ : ಪಟ್ಟಣದಲ್ಲಿ ದಿನನಿತ್ಯ ಜನರು ಅಗತ್ಯ ಸಾಮಗ್ರಿಗಳನ್ನು ತೆಗೆದುಕೊಳ್ಳುವ ಜಾಗಗಳು, ತರಕಾರಿ ಮಾರಾಟ ಸ್ಥಳಗಳಿಗೆ ಪುರಸಭೆ ವತಿಯಿಂದ 3ನೇ ಬಾರಿಗೆ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣವನ್ನು ಪವರ್ ಸ್ಪ್ರೇ ಮೂಲಕ  ಸಿಂಪಡಿಸಲಾಯಿತು.